ಮಾಮ್‌ಕೋಸ್
MAMCOS
Back to Gallery

ಕೊಪ್ಪ-ಷೇರುದಾರರ ಸಮಾಲೋಚನಾ ಸಭೆ

2022-08-04
Event

ಶಿವಮೊಗ್ಗ ಮಾಮ್ ಕೋಸ್ಕೊಪ್ಪ ಶಾಖೆಯ ಷೇರುದಾರರ ಸಮಾಲೋಚನಾ ಸಭೆ ನಡೆಸಲಾಯಿತು.ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಹೆಚ್.ಎಸ್.ಮಹೇಶ್ ಹುಲ್ಕುಳಿ ಇವರು ಸಂಸ್ಥೆಯ ಪ್ರಗತಿ ಕುರಿತು ಹಾಗೂ ಷೇರುದಾರರ ಸಲಹೆ ಮತ್ತು ಪ್ರಶ್ನೆಗಳಿಗೆ ಉತ್ತರಿಸಿದರು. ಸಂಸ್ಥೆಯ ನಿರ್ದೇಶಕರಾದ ಶ್ರೀ ನರೇಂದ್ರ.ಬಿ.ಸಿ ಅವರು ಎಲ್ಲರನ್ನು ಸ್ವಾಗತಿಸಿದರು.ಮಾಜಿ ಉಪಾಧ್ಯಕ್ಷರಾದ ಶ್ರೀ ವೈ.ಎಸ್.ಸುಬ್ರಹ್ಮಣ್ಯ, ನಿರ್ದೇಶಕರುಗಳಾದ ಬಡಿಯಣ್ಣ. ಹೆಚ್.ಎಂ. ಭೀಮರಾವ್. ಸುಬ್ರಹ್ಮಣ್ಯ ವಡ್ಡಿನಬೈಲು. ರತ್ನಾಕರ ಬೆಳಗಿನ ಮನೆ, ಪರಾಶರ ಶೃಂಗೇರಿ, ಸುರೇಶ್ಚಂದ್ರ ಎ, ಜಿ.ಈ.ವಿರೂಪಾಕ್ಷಪ್ಪ. ದಿನೇಶ್ ಬರದಹಳ್ಳಿ. ಕೀರ್ತಿರಾಜ್ ಕಾನಳ್ಳಿ. ಕೆ.ವಿ.ಕೃಷ್ಣಮೂರ್ತಿ. ಶ್ರೀಮತಿ ವಿಜಲಕ್ಷ್ಮೀ, ಶ್ರೀಮತಿ ಜಯಶ್ರೀ. ಶಾಖಾ ವ್ಯವಸ್ಥಾಪಕರಾದ ಶ್ರೀಮತಿ ನಾಗವೇಣಿ.ಎನ್.ಪಿ. ಹಾಗೂ ಷೇರುದಾರರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ನಿರ್ದೇಶಕರಾದ ವೈ.ಎಸ್.ಸುಬ್ರಹ್ಮಣ್ಯ ಅವರು ವಂದನಾರ್ಪಣೆ ಸಲ್ಲಿಸಿದರು.ಸಭೆಯ ಪ್ರಾರಂಭದಲ್ಲಿ ಶ್ರೀಮತಿ ಆಶಾಲತಾ ಸಿ ಶೆಟ್ಟಿ ಹಾಗೂ ಶ್ರೀಮತಿ ಪೂರ್ಣಿಮಾ.ಹೆಚ್.ಎಸ್. ಅವರು ಪ್ರಾರ್ಥನೆ ಮಾಡಿದರು.