ಸದಸ್ಯರಿಗೆ ನೀಡುತ್ತಿರುವ ಸೌಲಭ್ಯಗಳು

ವಿವಿಧ ಸಾಲ ಸೌಲಭ್ಯಗಳು

ಅಡಿಕೆ ಆಧಾರ ಸಾಲ

:

ರೈತರ ಮಾಲಿನ ಮೇಲೆ ಶೇ. 60 ರಷ್ಟು ಮುಂಗಡ ಪಾವತಿ
ಕಟಾವು ಸಾಲ : ಪ್ರತಿ ಗುಂಟೆಗೆ ರೂ.` 1,300/- ಅಥವಾ ಪ್ರತಿ ಎಕರೆಗೆ ರೂ. ` 52,000/- ರಂತೆ ಅಡಿಕೆ ವಹಿವಾಟು ಆಧರಿಸಿ, ಗರಿಷ್ಠ  ಒಂದು ಲಕ್ಷ.  ಈ ಸಾಲದ ಸೌಲಭ್ಯವನ್ನು “ಮಾಮ್ಕೋಸ್ ಕ್ರೆಡಿಟ್ ಕಾರ್ಡ್”    ಮೂಲಕ ಪಡೆಯಬಹುದು.
ಕೂಳೆ ಔಷಧಿ ಸಾಲ : ಪ್ರತಿ ಗುಂಟೆಗೆ ರೂ.` 150/- ಅಥವಾ ಪ್ರತಿ ಎಕರೆಗೆ ರೂ. ` 6000/- ರಂತೆ, ಅಡಿಕೆ ವಹಿವಾಟು ಆಧರಿಸಿ, ಗರಿಷ್ಠ ರೂ. ` 25,000/-. ಒಂದು ವೇಳೆ ಔಷಧಿ ಸಾಲವನ್ನು ಮಾತ್ರ ಪಡೆಯಲು ಇಚ್ಛಿಸಿದಲ್ಲಿ ಅಂತಹವರಿಗೆ ಪ್ರತಿ ಗುಂಟೆಗೆ ರೂ. ` 250/- ರಂತೆ ಗರಿಷ್ಠ ` 25,000/-
ನಿಗಧಿತ ಠೇವಣಿ ಆಧಾರ ಸಾಲ : ಠೇವಣಿ ಹಣದ ಮೇಲೆ ಶೇ. 80 ರಷ್ಟು

ವಿವಿಧ ಠೇವಣಿ ಯೋಜನೆಗಳು

ಉಳಿತಾಯ ಖಾತೆ : 4.00%
ನಿಗದಿತ ಅವಧಿ ಠೇವಣಿ 12 ತಿಂಗಳುಗಳಿಗೆ : 6.50%
ನಿಗದಿತ ಅವಧಿ ಠೇವಣಿ 12 ತಿಂಗಳುಗಳಿಗೆ – ಹಿರಿಯ ನಾಗರೀಕ ಸದಸ್ಯರಿಗೆ : 6.75%

ಸದಸ್ಯರ ಕ್ಷೇಮಾಭಿವೃದ್ಧಿ ನಿಧಿ

ಅಡಿಕೆ ಮಾರಾಟದ ಹಣದ ಮೇಲೆ ಶೇ. 0.13 ರಷ್ಟು ಬೋನಸ್ ನೀಡಿಕೆ.
ಅಸ್ತ್ರ ಒಲೆ ನಿರ್ಮಾಣಕ್ಕೆ ರೂ. 1000.00 ಮತ್ತು ಡ್ರೈಯರ್ ನಿರ್ಮಾಣಕ್ಕೆ ರೂ.  7000.00 ಸಹಾಯ ಧನ ನೀಡಿಕೆ.
ಸಂಘದ ಮೂಲಕ ನೀಡಿದ ಗಟಾರ್ ಸ್ಪ್ರೇಯರ್ ಗೆ ರೂ. ` 1000.00 ಸಹಾಯ ಧನ ನೀಡಿಕೆ.

ಅಡಿಕೆ ಸಂಶೋಧನಾ ನಿಧಿ

ಅಡಿಕೆ ಬೆಳೆ ಸಂರಕ್ಷಣೆಯ ಸಂಶೋಧನೆಗೆ ಹಾಗೂ ಅಡಿಕೆ ಸಂಸ್ಕರಣಾ ಯಂತ್ರೋಪಕರಣಗಳ  ಅನ್ವೇಷಣೆ / ಅಭಿವೃದ್ಧಿಗೆ ಆರ್ಥಿಕ ನೆರವು.

ಸದಸ್ಯರ ಅಡಿಕೆ ತೋಟಗಳಿಗೆ ತಗಲುವ ರೋಗಗಳ ನಿಯಂತ್ರಣಕ್ಕೆ ಕೃಷಿ ವಿಶ್ವವಿದ್ಯಾನಿಲಯಗಳ ವಿಜ್ಞಾನಿಗಳಿಂದ ತಾಂತ್ರಿಕ ಸಲಹೆ ನೀಡುವ ವ್ಯವಸ್ಥೆ.

ಗೋದಾಮು ಸೌಲಭ್ಯಗಳು

ಸದಸ್ಯರ ಅಡಿಕೆಯನ್ನು ಉಚಿತವಾಗಿ ಒಂದು ವರ್ಷದ ಅವಧಿಗೆ ಸಂಗ್ರಹಿಸಿಡುವ ಸೌಲಭ್ಯ.

ಸದಸ್ಯರು ಸ್ಪರ್ಧಾತ್ಮಕ ದರಗಳನ್ನು ಪಡೆಯಲು ಅನುವಾಗಲು ದಾಸ್ತಾನನ್ನು ಯಾವುದೇ ಶಾಖೆಯಿಂದ ಅವರು ಅಪೇಕ್ಷಿಸುವ ಬೇರೆ ಶಾಖೆಗಳಿಗೆ ವರ್ಗಾಯಿಸಿ ಕೊಡುವ ಸೌಲಭ್ಯ.

ವಿಮಾ ಸೌಲಭ್ಯಗಳು

ಪ್ರತಿ ಸದಸ್ಯ ಮತ್ತು ಅವರ ತೋಟದಲ್ಲಿ ಮರ ಹತ್ತುವ ಒಬ್ಬ ಹೆಸರಿಸದ ಕೂಲಿ ಕಾರ್ಮಿಕನಿಗೆ ಗರಿಷ್ಠ ತಲಾ 5 ಲಕ್ಷ ಮಿಮಾ ಸೌಲಭ್ಯ ಮತ್ತು ರೂ. 1.5 ಲಕ್ಷದವರೆಗೆ ಆಸ್ಪತ್ರೆ ವೆಚ್ಚವನ್ನು ಭರಿಸುವ ವಿಮಾ ಸೌಲಭ್ಯವನ್ನು “ಗುಂಪು ವಿಮಾ ಅಭಿರಕ್ಷೆ ಯೋಜನೆ” ಯಡಿ ಪಡೆಯಬಹುದಾಗಿದೆ.  ಈ ಸೌಲಭ್ಯ ಪಡೆಯಲು ಬಯಸುವ ಸದಸ್ಯನು ರೂ. 1000.00 ಪ್ರಿಮಿಯಂನ್ನು ವರ್ಷದ ಏಪ್ರಿಲ್, ಮೇ ತಿಂಗಳಲ್ಲಿ  ಪಾವತಿಸಬೇಕಾಗುತ್ತದೆ.

ಪ್ರತಿ ಸದಸ್ಯ ಮತ್ತು ಸದಸ್ಯರು ಇಚ್ಚಿಸಿದ್ದಲ್ಲಿ ಅವರ ಪತ್ನಿ/ಪತಿ/ತಂದೆ/ತಾಯಿ/ಅವಲಂಭಿತ ಸಹೋದರ/ಅವಿವಾಹಿತಾ ಸಹೋದರಿ/ಮಗ/ಸೊಸೆ/ ಮೊಮ್ಮಕ್ಕಳು (ಮಗನ ಮಕ್ಕಳು)/ಅವಿವಾಹಿತ ಮಗಳು ಇವರಿಗೆ ಗರಿಷ್ಠ ತಲಾ 4 ಲಕ್ಷ ದಷ್ಟು ಆರೋಗ್ಯಕ್ಕೆ ಸಂಬಂಧಿಸಿದ ವೆಚ್ಚವನ್ನು ಭರಿಸುವ ವಿಮಾ ಸೌಲಭ್ಯವನ್ನು ” ಆರೋಗ್ಯ ವಿಮಾ ಯೋಜನೆ” ಯಡಿ ಪಡೆಯಬಹುದಾಗಿದೆ. ಈ ಸೌಲಭ್ಯ ಪಡೆಯಲು ಬಯಸುವ ಸದಸ್ಯನು ತಲಾ ಒಬ್ಬರಿಗೆ ರೂ.4100.00 ಪ್ರೀಮಿಯಂನ್ನಯ ವರ್ಷದ ಅಕ್ಟೋಬರ್ ನಿಂದ ಡಿಸೆಂಬರ್  ತಿಂಗಳಲ್ಲಿ ಪಾವತಿಸಬೇಕಾಗುತ್ತದೆ.

ವೈದ್ಯಕೀಯ ಸೌಲಭ್ಯಗಳು

“ಶಂಕರ ಕಣ್ಣಿನ  ಆಸ್ಪತ್ರೆ” ಶಿವಮೊಗ್ಗ,  ಇವರೊಂದಿಗೆ ಸಂಸ್ಥೆಯು ಮಾಡಿಕೊಂಡಿರುವ ಒಪ್ಪಂದ ವ್ಯವಸ್ಥೆ ಅನ್ವಯ ಪ್ರತಿ ಸದಸ್ಯರು ಹಾಗೂ ಅವರ ನಿಗಧಿತ ಕುಟುಂಬ  ಉಚಿತ “ಒರ ರೋಗಿ ವೈದ್ಯಕೀಯ ಚಿಕಿತ್ಸೆ” ಸೌಲಭ್ಯವನ್ನು ಪಡೆಯಬಹುದಾಗಿದೆ. ಒಂದು ವೇಳೆ ಸರ್ಜರಿಗೆ ಒಳಪಟ್ಟಲ್ಲಿ ಇಪ್ಪತ್ತು ಸಾವಿರ ಮೇಲ್ಪಟ್ಟರೆ ಶೇ 15, ಇಪ್ಪತ್ತು ಸಾವಿರದ ಒಳಗಿದ್ದರೆ ಮತ್ತು ಕನ್ನಡಕಗಳನ್ನು ಖರೀದಿಸಬೇಕಾದಲ್ಲಿ ಶೇ 10ರ ವಿಶೇಷ ರಿಯಾತಿ ಸೌಲಭ್ಯವನ್ನು ಪಡೆಯಬಹುದಾಗಿರುತ್ತದೆ.  ಈ ಸೌಲಭ್ಯ ಪಡೆಯಲು ಸದಸ್ಯರು ಸಂಘದಿಂದ ನೀಡಿದ ಸ್ಮಾರ್ಟ್ ಕಾರ್ಡ್ ನ್ನು ಮತ್ತು ಅವರ ಕುಟುಂಬದವರು ಸ್ಮಾರ್ಟ್ ಕಾರ್ಡ್ ಜೊತೆಗೆ ಕುಟುಂಬದ ಪಡಿತರ ಚೀಟಿಯನ್ನು ಹಾಜರು ಪಡಿಸುವುದು ಕಡ್ಡಾಯವಾಗಿರುತ್ತದೆ.

ಪಾರಿತೋಷಕ ಬಹುಮಾನ ನೀಡಿಕೆ ಸೌಲಭ್ಯ

ಸದಸ್ಯರು ಮಕ್ಕಳಲ್ಲಿ ಎಸ್.ಎಸ್.ಎಲ್.ಸಿ., ಪಿ.ಯೂ.ಸಿ., ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ರೂ. 2,500.00 ಮತ್ತು ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ತಲಾ ರೂ. 3,000.00 ಹಾಗೂ ಜಿ.ಡಿ.ಸಿ ತರಬೇತಿ ಪಡೆದ ಪ್ರತಿ ತಂಡದಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ತಲಾ ರೂ. 2,000.00 ಪ್ರೋತ್ಸಾಹಧನವನ್ನು ಪ್ರತಿ ವರ್ಷ ನೀಡಲಾಗುತ್ತಿದೆ.  ಈ ರೀತಿಯ ಪ್ರೋತ್ಸಾಹಧನವನ್ನು ಪ್ರತಿ ವರ್ಷ ಒಟ್ಟು 109 ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.

ತಂತ್ರಜ್ಙಾನ ಸೌಲಭ್ಯಗಳು

ಸಂಘದ ಎಲ್ಲಾ ವ್ಯವಹಾರವನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸಲಾಗಿದೆ.

ಕ್ಷೇತ್ರದಲ್ಲಿನ ಇತ್ತೀಚಿನ ಮಾಹಿತಿಯನ್ನು ನೀಡಲು ಅನುವಾಗುವಂತೆ “ಅಡಿಕೆ ತಂತ್ರಜ್ಞಾನ ಮತ್ತು ಮಾರುಕಟ್ಟೆ ಮಾಹಿತಿ ಕೇಂದ್ರ” ವನ್ನು ಕೇಂದ್ರ ಕಛೇರಿಯಲ್ಲಿ ಸ್ಥಾಪಿಸಲಾಗಿದೆ.

ಸಂಘವು ತನ್ನದೆ ಆದ www.mamcos.info “ವೆಬ್ ಸೈಟ್” ನ್ನು ಹೊಂದಿರುತ್ತದೆ.

ಸಂಘದ ನೊಂದಾಯಿಸಿದ ಸದಸ್ಯರಿಗೆ ಅಡಿಕೆಯ ಟೆಂಡರ್ ಧಾರಣೆಯನ್ನು ಅವರವರ ಮೊಬೈಲ್ ಫೋನ್ ಗೆ ಎಸ್.ಎಂ.ಎಸ್ ಮೂಲಕ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ.

ಗುರುತಿನ ಕಾರ್ಡ್ ಸೌಲಭ್ಯ

ಸದಸ್ಯರಿಗೆ ಭಾವಚಿತ್ರ ಸಹಿತ ಗುರುತಿನ ಕಾರ್ಡ್ (ಸ್ಮಾರ್ಟ್ ಕಾರ್ಡ್) ನೀಡಲಾಗುತ್ತಿದೆ.  ಈ ಸ್ಮಾರ್ಟ್ ಕಾರ್ಡ್ ಸಂಘದಲ್ಲಿ ವ್ಯವಹರಿಸಲು ವಿವಿಧ ಸೌಲಭ್ಯಗಳನ್ನು ತ್ವರಿತವಾಗಿ ಪಡೆಯಲು, ವಾರ್ಷಿಕ ಮಹಾಸಭೆಗಳಲ್ಲಿ ಭಾಗವಹಿಸಲು ಹಾಗೂ ಚುನಾವಣೆಯಲ್ಲಿ ಮತ ಚಲಾಯಿಸಲು ಕಡ್ಡಾಯವಾಗಿರುತ್ತದೆ.

ಮರಣೋತ್ತರ ಸೌಲಭ್ಯಗಳು

60 ವರ್ಷದೊಳಗಿನ ಸಂಘದ ಸದಸ್ಯರು ರೂ. 3,000.00, 5,000.00 ಹಾಗೂ 10,000.00 ಸ್ಲ್ಯಾಬ್ ಗಳಲ್ಲಿ ಆಯ್ಕೆ ಮಾಡಿ ನೊಂದಾಯಿಸಿದಲ್ಲಿ, ತಮ್ಮ ನಂತರ ನಾಮಿನಿ / ವಾರಸುದಾರರಿಗೆ ಕ್ರಮವಾಗಿ ರೂ. 15,000.00, 25,000.00  ಹಾಗೂ 50,000.00 ವನ್ನು “ಮರಣೋತ್ತರ ನಿಧಿ” ಯೋಜನೆಯಲ್ಲಿ ಹಲವು ನಿಭಂದನೆಗೆ ಒಳಪಟ್ಟು ನೀಡಲಾಗುತ್ತದೆ.

ಸತತವಾಗಿ ಕಳೆದ 3 ವರ್ಷಗಳಲ್ಲಿ ಅಥವಾ ಪ್ರಸಕ್ತ ವರ್ಷವೂ ಸೇರಿದಂತೆ  3 ವರ್ಷಗಳಲ್ಲಿ 1 ವರ್ಷ  ಅಡಿಕೆಯನ್ನು ಹಾಕಿ ವ್ಯವಹರಿಸಿದ ಸದಸ್ಯರು ಮೃತರಾದಲ್ಲಿ ಅವರ ಅಂತ್ಯ ಸಂಸ್ಕಾರಕ್ಕೆ, ಅವರ ನಾಮಿನಿ / ವಾರಸುದಾರರಿಗೆ ಸಂಘದಿಂದ `5,000 ಆರ್ಥಿಕ ನೆರವನ್ನು ನೀಡಲಾಗುತ್ತದೆ.

ಇತರೆ ಕೃಷಿಗೆ ಸಂಬಂಧಿಸಿ ಸೌಲಭ್ಯಗಳು

ಮಾಮ್ ಕೋಸ್ ಸಸ್ಯ ಚೈತನ್ಯ ಗೊಬ್ಬರ ಮತ್ತು ಇತರೆ

ಪವರ್ ಸ್ಪೇಯರ್

ಸುಣ್ಣ , ತುತ್ತಾ, ರಾಳದ ಮಾರಾಟ

 

 

ಸೂಚನೆ: ಹೆಚ್ಚಿನ ವಿವರಗಳಿಗೆ ಕೇಂದ್ರ ಕಛೇರಿ, ಹತ್ತಿರದ ಶಾಖೆ ಅಥವಾ ಏಜನ್ಸಿಯನ್ನು ಸಂಪರ್ಕಿಸಲು ವಿನಂತಿಸಿದೆ….