ನಾವು ನೀಡುವ ಕೊಡುಗೆ

ವೈದ್ಯಕೀಯ ಸೌಲಭ್ಯಗಳು

“ಶಂಕರ ಕಣ್ಣಿನ ಆಸ್ಪತ್ರೆ” ಶಿವಮೊಗ್ಗ, ಇವರೊಂದಿಗೆ ಸಂಸ್ಥೆಯು ಮಾಡಿಕೊಂಡಿರುವ ಟೈ-ಅಪ್ ವ್ಯವಸ್ಥೆ ಅನ್ವಯ ಪ್ರತಿ ಸದಸ್ಯನು ಹಾಗೂ ಅವರ ನಿಗಧಿತ ಕುಟುಂಬ ಸದಸ್ಯರು ಉಚಿತ “Out-Patient Medical treatment” ಸೌಲಭ್ಯವನ್ನು ಪಡೆಯಬಹುದಾಗಿದೆ. ಒಂದು ವೇಳೆ ಸರ್ಜರಿಗೆ ಒಳಪಟ್ಟಲ್ಲಿ ಅಥವಾ ಕನ್ನಡಕಗಳನ್ನು ಖರೀದಿಸಬೇಕಾದಲ್ಲಿ, ಶೇ 10ರ ವಿಶೇಷ ರಿಯಾಯಿತಿ ಸೌಲಭ್ಯವನ್ನು ಪಡೆಯಬಹುದಾಗಿರುತ್ತದೆ. ಈ ಸೌಲಭ್ಯ ಪಡೆಯಲು ಸದಸ್ಯರು ಸಂಘದಿಂದ ನೀಡಿದ ಸ್ಮಾರ್ಟ್ ಕಾರ್ಡ್ ಮತ್ತು ಅವರ ಕುಟುಂಬದವರು ಸ್ಮಾರ್ಟ್ ಕಾರ್ಡ್ ಜೊತೆಗೆ ಕುಟುಂಬದ ಪಡಿತರ ಚೀಟಿಯನ್ನು ಹಾಜರು ಪಡಿಸುವುದು ಕಡ್ಡಾಯವಾಗಿರುತ್ತದೆ.

 

ಪಾರಿತೋಷಕ ಬಹುಮಾನ ನೀಡಿಕೆ ಸೌಲಭ್ಯ :-

ಸದಸ್ಯರ ಮಕ್ಕಳಲ್ಲಿ ಎಸ್.ಎಸ್.ಎಲ್.ಸಿ., ಪಿ.ಯೂ.ಸಿ., ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ` 2,000.00 ಮತ್ತು ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ತಲಾ ` 2,500.00 ಹಾಗೂ ಜಿ.ಡಿ.ಸಿ. ತರಬೇತಿ ಪಡೆದ ಪ್ರತಿ ತಂಡದಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ತಲಾ ` 2,000.00 ಪ್ರೋತ್ಸಾಹಧನ ಪ್ರತಿ ವರ್ಷ ನೀಡಲಾಗುತ್ತಿದೆ. ಈ ರೀತಿಯ ಪ್ರೋತ್ಸಾಹಧನವನ್ನು ಪ್ರತಿ ವರ್ಷ ಒಟ್ಟು 115 ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.

ಅಂತ್ಯ ಸಂಸ್ಕಾರ ನಿಧಿ ಯೋಜನೆ:

ಸತತವಾಗಿ ಕಳೆದ 3 ವರ್ಷಗಳಲ್ಲಿ ಅಥವಾ ಪ್ರಸಕ್ತ ವರ್ಷವೂ ಸೇರಿದಂತೆ ಸತತ 3 ವರ್ಷಗಳಲ್ಲಿ ಅಡಿಕೆಯನ್ನು ಹಾಕಿ ವ್ಯವಹರಿಸಿದ ಸದಸ್ಯರು ಮೃತರಾದಲ್ಲಿ ಅವರ ಅಂತ್ಯ ಸಂಸ್ಕಾರಕ್ಕೆ, ಅವರ ನಾಮಿನಿ/ವಾರಸುದಾರರಿಗೆ ಸಂಘದಿಂದ ` 5,000-00 ಆರ್ಥಿಕ ನೆರವನ್ನು ನೀಡಲಾಗುತ್ತದೆ.