ನಾವು ನೀಡುವ ಸೇವೆ

ಸದಸ್ಯರ ಕ್ಷೇಮಾಭಿವೃದ್ಧಿ ನಿಧಿಯಿಂದ ನೀಡುತ್ತಿರುವ ಸೌಲಭ್ಯಗಳು:

ಸಹಾಯಧನ ಸಹಾಯಧನದ ಮೊಬಲಗು
ಅಸ್ತ್ರ ಒಲೆ ನಿರ್ಮಾಣಕ್ಕೆ ರೂ.1,000
ಗಟಾರ್‌ ಸ್ಪ್ರೇಯರ್ ಯಂತ್ರದ ಖರೀದಿಗೆ ರೂ.1,000
ಡ್ರೈಯರ್ ನಿರ್ಮಾಣಕ್ಕೆ ರೂ.7,000

• ಅಡಿಕೆ ಮಾರಾಟದ ಹಣದ ಮೇಲೆ ಶೇ.0.13 ರಷ್ಟು ಬೋನಸ್ ನೀಡಿಕೆ.

ಅಡಿಕೆ ಸಂಶೋಧನಾ ನಿಧಿಯಿಂದ ನೀಡುತ್ತಿರುವ ಸೌಲಭ್ಯಗಳು

  • ಅಡಿಕೆ ಬೆಳೆ ಸಂರಕ್ಷಣೆಯ ಸಂಶೋಧನೆಗೆ ಹಾಗೂ ಅಡಿಕೆ ಸಂಸ್ಕರಣಾ ಯಂತ್ರೋಪಕರಣಗಳ ಅನ್ವೇಷಣೆ/ಅಭಿವೃದ್ದಿಗೆ ಆರ್ಥಿಕ ನೆರವು.
  • ಸದಸ್ಯರ ಅಡಿಕೆ ತೋಟಗಳಿಗೆ ತಗಲುವ ರೋಗಗಳ ನಿಯಂತ್ರಣಕ್ಕೆ ಕೃಷಿ ವಿಶ್ವವಿದ್ಯಾನಿಲಯಗಳ ವಿಜ್ಞಾನಿಗಳಿಂದ ತಾಂತ್ರಿಕ ಸಲಹೆ ನೀಡುವ ವ್ಯವಸ್ಥೆ.

 

ಗೋದಾಮು ಸೌಲಭ್ಯಗಳು

  • ಸದಸ್ಯರ ಅಡಿಕೆಯನ್ನು ಉಚಿತವಾಗಿ ಒಂದು ವರ್ಷದ ಅವಧಿಗೆ ಸಂಗ್ರಹಿಸಿಡುವ ಸೌಲಭ್ಯ.
  • ಸದಸ್ಯರು ಸ್ಪರ್ಧಾತ್ಮಕ ದರಗಳನ್ನು ಪಡೆಯಲು ಅನುವಾಗಲು ದಾಸ್ತಾನನ್ನು ಯಾವುದೇ ಶಾಖೆಯಿಂದ ಅವರು ಅಪೇಕ್ಷಿಸುವ ಬೇರೆ ಶಾಖೆಗಳಿಗೆ ವರ್ಗಾಯಿಸಿ ಕೊಡುವ ಸೌಲಭ್ಯ.
  • ಸಂಘದ ಶಿವಮೊಗ್ಗ, ಭದ್ರಾವತಿ, ಚನ್ನಗಿರಿ, ತರಿಕೆರೆ ಮತ್ತು ಕೊಪ್ಪ ಶಾಖೆಗಳಲ್ಲಿ ಅಡಿಕೆ ಸ್ವಚ್ಛಗೊಳಿಸುವ ಯಂತ್ರವನ್ನು ಅಳವಡಿಸಿದ್ದು, ಉಳಿದ ಶಾಖೆಗಳಲ್ಲಿಯೂ ಸಹ ಅಳವಡಿಸಲು ಉದ್ದೇಶಿಸಿದೆ.
  • ಸಂಘದ ಶಿವಮೊಗ್ಗ, ಸಾಗರ, ಕೊಪ್ಪ ಮತ್ತು ಹೊಸನಗರ, ಶಿವಮೊಗ್ಗ ನೇರ ಖರೀದಿ ಕೇಂದ್ರ, ತೀರ್ಥಹಳ್ಳಿ, ಶಾಖೆಗಳಲ್ಲಿ ಗೂಡ್ಸ್ ಲಿಫ್ಟ್ ಅಳವಡಿಸಿದ್ದು, ಅವಶ್ಯವಿರುವ ಉಳಿದ ಶಾಖೆಗಳಲ್ಲಿಯೂ ಗೂಡ್ಸ್ ಲಿಫ್ಟ್ ಅಳವಡಿಸಲು ಉದ್ದೇಶಿಸಿದೆ.

 

ವಿಮಾ ಸೌಲಭ್ಯಗಳು

ಗುಂಪು ವಿಮಾ ಯೋಜನೆ:

`ಮಾಮ್‌ಕೋಸ್’ ಸಂಸ್ಥೆಯು ತನ್ನ ಸದಸ್ಯರಿಗಾಗಿ `ಗುಂಪು ವಿಮಾ ಅಭಿರಕ್ಷೆ ಯೋಜನೆ’ ಅನ್ನು ಜಾರಿಗೆ ತಂದಿದ್ದು, ಇದರಲ್ಲಿ ಸದಸ್ಯರು ಸಂಘದ ಶಾಖೆಗಳ ಮೂಲಕ ವಂತಿಕೆ ಮೊಬಲಗನ್ನು ಪಾವತಿಸಿದರೆ ಆ ಸದಸ್ಯರಿಗೆ ಮತ್ತು ಅವರ ಹೆಸರಿಸದ ಅವಲಂಬಿತ ಕೂಲಿ ಕಾರ್ಮಿಕರುಗಳಿಗೆ ಹಾಗೂ ಕುಟುಂಬದ ಸದಸ್ಯರಿಗೆ ವಿಮೆ ಮಾಡಲಾಗುವುದು (ತಲಾ.575-00ನ್ನು ಪಾವತಿಸಿ ಎಷ್ಟು ಜನ ಕೂಲಿ ಕಾರ್ಮಿಕರನ್ನು ನೋಂದಾಯಿಸಲು ಅವಕಾಶವನ್ನು ಕಲ್ಪಿಸಿಸಲಾಗಿದೆ) ವರದಿ ಸಾಲಿನಲ್ಲಿ ಈ ಯೋಜನೆ ಅಡಿಯಲ್ಲಿ 72 ಪ್ರಕರಣಗಳಲ್ಲಿ ರೂ.76,08,826.00 ಪರಿಹಾರ ನೀಡಲಾಗಿದೆ.

ನೋಂದಣಿಯ ಅವಧಿ:

ಹಂತ ವಿಮಾ ಕಂತು ಜಮಾ ಮಾಡಿಸುವ ಅವಧಿ ಯೋಜನೆ ಜಾರಿ ದಿನಾಂಕ
ಒಂದನೇ ಹಂತ 01/04/2023 ರಿಂದ 30/05/2023 01/06/2023 ರಿಂದ 31/05/2024
ಎರಡನೇ ಹಂತ 01/10/2023 ರಿಂದ 28/11/2023 01/12/2023 ರಿಂದ 30/11/2024
ವಯೋಮಿತಿ ವಿಮಾ ಕಂತು ಪರಿಹಾರದ ಮೊತ್ತ
ಅಪಘಾತವಾದಲ್ಲಿ

ಮರಣಪರಿಹಾರ:

70 ವರ್ಷದೊಳಗಿನ ಸದಸ್ಯರಿಗೆ ಮತ್ತು ಅವರ ಹೆಸರಿಸದ ಅವಲಂಬಿತ ಕೂಲಿ ಕಾರ್ಮಿಕರಿಗೆ ರೂ. 1,150.00 ರೂ.1.50 ಲಕ್ಷ. ಆಸ್ಪತ್ರೆಯ ಚಿಕಿತ್ಸಾ ಖರ್ಚು ಮತ್ತು ಅಂಬ್ಯುಲೆನ್ಸ್ ವೆಚ್ಚ ಗರಿಷ್ಟ ರೂ.1,000.00 ಅಪಘಾತವಾಗಿ ಮರಣ ಹೊಂದಿದಲ್ಲಿ ಮರಣ ಪರಿಹಾರ ರೂ.6.00 ಲಕ್ಷ, ಮತ್ತು ಅಂಬ್ಯುಲೆನ್ಸ್ ವೆಚ್ಚ ಗರಿಷ್ಠ ರೂ.2,500.00
71-80 ವರ್ಷದೊಳಗಿನವರಿಗೆ (ಸದಸ್ಯರಿಗೆ ಮಾತ್ರ 71-80 ವರ್ಷ ಮತ್ತು ಅವರ ಹೆಸರಿಸದ ಅವಲಂಬಿತ ಕೂಲಿ ಕಾರ್ಮಿಕರಿಗೆ 70 ವರ್ಷದೊಳಗಿನವರಿರಬೇಕು) ರೂ. 1050.00 ರೂ.1.50 ಲಕ್ಷ ಆಸ್ಪತ್ರೆಯ ಚಿಕಿತ್ಸಾ ಖರ್ಚು ಮತ್ತು ಅಂಬ್ಯುಲೆನ್ಸ್ ವೆಚ್ಚ ಗರಿಷ್ಟ ರೂ.1,000.00 ರೂ.5.00 ಲಕ್ಷ ಹಾಗೂ ಕೂಲಿ ಕಾರ್ಮಿಕರಿಗೆ ರೂ.6.00 ಲಕ್ಷ ಅಂಬ್ಯುಲೆನ್ಸ್ ವೆಚ್ಚ ಗರಿಷ್ಟ ರೂ.2,500.00
81-90 ವರ್ಷದೊಳಗಿನವರಿಗೆ (ಸದಸ್ಯರಿಗೆ ಮಾತ್ರ 81-90 ವರ್ಷ ಮತ್ತು ಅವರ ಹೆಸರಿಸದ ಅವಲಂಬಿತ ಕೂಲಿ ಕಾರ್ಮಿಕರಿಗೆ 70 ವರ್ಷದೊಳಗಿನವರಿರಬೇಕು) ರೂ. 990.00 ಸದಸ್ಯರಿಗೆ ರೂ.1.00 ಲಕ್ಷ ಕೂಲಿ ಕಾರ್ಮಿಕರಿಗೆ ರೂ.1.50 ಲಕ್ಷ ಮತ್ತು ಅಂಬ್ಯುಲೆನ್ಸ್ ವೆಚ್ಚ ಗರಿಷ್ಟ ರೂ.1,000.00 ಸದಸ್ಯರಿಗೆ – ರೂ.4.00 ಲಕ್ಷ ಹಾಗೂ ಕೂಲಿ ಕಾರ್ಮಿಕರಿಗೆ ರೂ.6.00 ಲಕ್ಷ ಮತ್ತು ಅಂಬ್ಯುಲೆನ್ಸ್ ವೆಚ್ಚ ಗರಿಷ್ಟ ರೂ.2,500.00
ಸದಸ್ಯರ ಕುಟುಂಬಕ್ಕೆ
(10-70 ವರ್ಷದೊಳಗಿನವರಿಗೆ ಸದಸ್ಯರ ಗಂಡ/ಹೆAಡತಿ, ಮಗ/ಸೊಸೆ/ ಅವಿವಾಹಿತ ಮಗಳು/ಸಹೋದರ/
ಸಹೋದರಿ)
ರೂ. 170.00

(ತಲಾ ಒಬ್ಬರಿಗೆ)

 ಚಿಕಿತ್ಸಾ ಖರ್ಚು ರೂ.50,000/- ಮತ್ತು ಅಂಬ್ಯುಲೆನ್ಸ್ ವೆಚ್ಚ ಗರಿಷ್ಠ ರೂ.1,000.00 ರೂ.2.00 ಲಕ್ಷ ಮತ್ತು ಅಂಬ್ಯುಲೆನ್ಸ್ ವೆಚ್ಚ ಗರಿಷ್ಟ ರೂ.1,000.00

ತಂತ್ರಜ್ಞಾನ ಸೌಲಭ್ಯಗಳು:

  • ಸಂಘದ ಎಲ್ಲಾ ವ್ಯವಹಾರವನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸಲಾಗಿದೆ.
  • ಕ್ಷೇತ್ರದಲ್ಲಿನ ಇತ್ತೀಚಿನ ಮಾಹಿತಿಯನ್ನು ನೀಡಲು ಅನುವಾಗುವಂತೆ “ಅಡಿಕೆ ತಂತ್ರಜ್ಞಾನ ಮತ್ತು ಮಾರುಕಟ್ಟೆ ಮಾಹಿತಿ ಕೇಂದ್ರ”ವನ್ನು ಕೇಂದ್ರ ಕಛೇರಿಯಲ್ಲಿ ಸ್ಥಾಪಿಸಲಾಗಿದೆ.
  • ಸಂಘವು ತನ್ನದೇ ಆದ MAMCOS ಎಂಬ ಮೊಬೈಲ್ ಆ್ಯಪ್ ಮತ್ತು MAMCOS.INFO ವೆಬ್‌ಸೈಟ್’ನ್ನು ಹೊಂದಿರುತ್ತದೆ.

 

ಗುರುತಿನ ಕಾರ್ಡ್ ಸೌಲಭ್ಯ

ಸದಸ್ಯರಿಗೆ ಭಾವಚಿತ್ರ ಸಹಿತ ಗುರುತಿನ ಕಾರ್ಡ್ (ಸ್ಮಾರ್ಟ್ ಕಾರ್ಡ್) ನೀಡಲಾಗುತ್ತಿದೆ. ಈ ಸ್ಮಾರ್ಟ್ ಕಾರ್ಡ್ ಸಂಘದಲ್ಲಿ ವ್ಯವಹರಿಸಲು, ವಿವಿಧ ಸೌಲಭ್ಯಗಳನ್ನು ತ್ವರಿತವಾಗಿ ಪಡೆಯಲು, ವಾರ್ಷಿಕ ಮಹಾಸಭೆಗಳಲ್ಲಿ ಭಾಗವಹಿಸಲು ಹಾಗೂ ಚುನಾವಣೆಯಲ್ಲಿ ಮತ ಚಲಾಯಿಸಲು ಕಡ್ಡಾಯವಾಗಿರುತ್ತದೆ.

ಮರಣೋತ್ತರ ನಿಧಿ ಯೋಜನೆ

60 ವರ್ಷದೊಳಗಿನ ಸಂಘದ ಸದಸ್ಯರು ರೂ.3,000, ರೂ.5,000 ಹಾಗೂ ರೂ.10,000 ಸ್ಲಾಬ್‘ಗಳಲ್ಲಿ ಆಯ್ಕೆ ಮಾಡಿ ನೋಂದಾಯಿಸಿದಲ್ಲಿ, ತಮ್ಮ ನಂತರ ನಾಮಿನಿ/ ವಾರಸುದಾರರಿಗೆ ಕ್ರಮವಾಗಿ ರೂ.15,000, ರೂ.25,000 ಹಾಗೂ ರೂ.50,000ವನ್ನು “ಮರಣೋತ್ತರ ನಿಧಿ ಯೋಜನೆ–II”ರಲ್ಲಿ ಹಲವು ನಿಬಂಧನೆಗೆ ಒಳಪಟ್ಟು ನೀಡಲಾಗುತ್ತಿದೆ.