ನಾವು ನೀಡುವ ಕೊಡುಗೆ
ಮಾಮ್ ಕೋಸ್ ಸಂಸ್ಥೆಯು ತನ್ನ ಸದಸ್ಯರಿಗೆ ಈ ಕೆಳಕಂಡಂತೆ ವಿವಿಧ ಸೌಲಭ್ಯವನ್ನು ನೀಡುತ್ತಿದೆ.
- ವೈದ್ಯಕೀಯ ಸೌಲಭ್ಯಗಳು
- ಪಾರಿತೋಷಕ ಬಹುಮಾನ ನೀಡಿಕೆ ಸೌಲಭ್ಯ
- ಅಂತ್ಯ ಸಂಸ್ಕಾರ ನಿಧಿ ಯೋಜನೆ
ವೈದ್ಯಕೀಯ ಸೌಲಭ್ಯಗಳು
“ಶಂಕರ ಕಣ್ಣಿನ ಆಸ್ಪತ್ರೆ” ಶಿವಮೊಗ್ಗ, ಇವರೊಂದಿಗೆ ಸಂಘವು ಮಾಡಿಕೊಂಡಿರುವ ಟೈ-ಅಪ್ ವ್ಯವಸ್ಥೆ ಅನ್ವಯ ಸದಸ್ಯರು ಹಾಗೂ ಅವರ ನಿಗಧಿತ ಕುಟುಂಬ ಸದಸ್ಯರು ಉಚಿತ “Out-Patient Medical treatment” ಸೌಲಭ್ಯವನ್ನು ಪಡೆಯಬಹುದಾಗಿದೆ. ಒಂದು ವೇಳೆ ಸರ್ಜರಿಗೆ ಒಳಪಟ್ಟಲ್ಲಿ ಅಥವಾ ಕನ್ನಡಕಗಳನ್ನು ಖರೀದಿಸಬೇಕಾದಲ್ಲಿ, ಶೇ 10ರ ವಿಶೇಷ ರಿಯಾಯಿತಿ ಸೌಲಭ್ಯವನ್ನು ಪಡೆಯಬಹುದಾಗಿರುತ್ತದೆ. ಈ ಸೌಲಭ್ಯ ಪಡೆಯಲು ಸದಸ್ಯರು ಸಂಘದಿಂದ ನೀಡಿದ ಸ್ಮಾರ್ಟ್ ಕಾರ್ಡ್ ಮತ್ತು ಅವರ ಕುಟುಂಬದವರು ಸ್ಮಾರ್ಟ್ ಕಾರ್ಡ್ ಜೊತೆಗೆ ಕುಟುಂಬದ ಪಡಿತರ ಚೀಟಿಯನ್ನು ಹಾಜರು ಪಡಿಸುವುದು ಕಡ್ಡಾಯವಾಗಿರುತ್ತದೆ.
ನ್ಯೂರೋ ಭಾರತ್ ಆಸ್ಪತ್ರೆ ಶಿವಮೊಗ್ಗ ಇವರೊಂದಿಗೆ ಸಂಘವು ಮಾಡಿಕೊಂಡಿರುವ ಟೈ-ಅಪ್ ವ್ಯವಸ್ಥೆ ಅನ್ವಯ ಸದಸ್ಯರು ಹಾಗೂ ಅವರ ನಿಗಧಿತ ಕುಟುಂಬ ಸದಸ್ಯರು ರೂ.250/- ರೂಗಳ ರಿಯಾಯಿತಿ ದರದಲ್ಲಿ “Out-Patient Medical treatment” ಸೌಲಭ್ಯವನ್ನು ಪಡೆಯಬಹುದಾಗಿದೆ. ಒಂದು ವೇಳೆ ಸರ್ಜರಿಗೆ ಒಳಪಟ್ಟಲ್ಲಿ ಶೇ 10ರ ವಿಶೇಷ ರಿಯಾಯಿತಿ ಸೌಲಭ್ಯವನ್ನು ಪಡೆಯಬಹುದಾಗಿರುತ್ತದೆ. ಈ ಸೌಲಭ್ಯ ಪಡೆಯಲು ಸದಸ್ಯರು ಸಂಘದಿಂದ ನೀಡಿದ ಸ್ಮಾರ್ಟ್ ಕಾರ್ಡ್ ಮತ್ತು ಅವರ ಕುಟುಂಬದವರು ಸ್ಮಾರ್ಟ್ ಕಾರ್ಡ್ ಜೊತೆಗೆ ಕುಟುಂಬದ ಪಡಿತರ ಚೀಟಿಯನ್ನು ಹಾಜರು ಪಡಿಸುವುದು ಕಡ್ಡಾಯವಾಗಿರುತ್ತದೆ.
ಆದರ್ಶ ಆಸ್ಪತ್ರೆ ಕೊಪ್ಪ ಹಾಗೂ ಲಯನ್ಸ್ ಸೇವಾ ಟ್ರಸ್ಟ್ (ರಿ) ಕೊಪ್ಪ ಇವರೊಂದಿಗೆ ಸಂಘವು ಮಾಡಿಕೊಂಡಿರುವ ಟೈ-ಅಪ್ ವ್ಯವಸ್ಥೆ ಅನ್ವಯ ಸದಸ್ಯರು ಶೇ10 ರ ರಿಯಾಯಿತಿ ದರದಲ್ಲಿ ಡಯಾಲಿಸಿಸ್ ಸೌಲಭ್ಯವನ್ನು ಕೊಪ್ಪದ ಆದರ್ಶ ಆಸ್ಪತ್ರೆಯಲ್ಲಿ ಪಡೆದುಕೊಳ್ಳಬಹುದಾಗಿದೆ. ಈ ಸೌಲಭ್ಯ ಪಡೆಯಲು ಸದಸ್ಯರು ಸಂಘದಿಂದ ನೀಡಿದ ಸ್ಮಾರ್ಟ್ ಕಾರ್ಡ್ ಹಾಜರು ಪಡಿಸುವುದು ಕಡ್ಡಾಯವಾಗಿರುತ್ತದೆ.
ಪಾರಿತೋಷಕ ಬಹುಮಾನ ನೀಡಿಕೆ ಸೌಲಭ್ಯ
ಸದಸ್ಯರ ಮಕ್ಕಳಲ್ಲಿ ಎಸ್.ಎಸ್.ಎಲ್.ಸಿ., ಪಿ.ಯೂ.ಸಿ., ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಾಲ್ಲೂಕಿಗೆ ಒಬ್ಬರಂತೆ ತಲಾ 2,000.00 ಮತ್ತು ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ತಲಾ 2,500.00 ಹಾಗೂ ಜಿ.ಡಿ.ಸಿ. ತರಬೇತಿ ಪಡೆದ ಪ್ರತಿ ತಂಡದಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ತಲಾ 2,000.00 ಪ್ರೋತ್ಸಾಹಧನ ಪ್ರತಿ ವರ್ಷ ನೀಡಲಾಗುತ್ತಿದೆ.
2022-23 ನೇ ಸಾಲಿನಲ್ಲಿ 57 ಪ್ರತಿಭೆಗಳಿಗೆ ರೂ.1,55,500.00 ಪಾವತಿಸಿದೆ. ಈ ಬಾರಿಯೂ ಸಹ ಸೆಪ್ಟೆಂಬರ್ 30 ರ ಒಳಗೆ ಪಾರಿತೋಷಕ ಬಹುಮಾನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಅಂತ್ಯ ಸಂಸ್ಕಾರ ನಿಧಿ ಯೋಜನೆ
ಸದಸ್ಯರು ಮೃತಪಟ್ಟ ಸಾಲಿನ ಹಿಂದಿನ ಸತತ ಮೂರು ವರ್ಷಗಳಲ್ಲಿ ಅಥವಾ ವರದಿ ಸಾಲೂ ಸೇರಿದಂತೆ ಸತತ ಮೂರು ವರ್ಷಗಳಲ್ಲಿ ಕನಿಷ್ಟ ಒಂದು ವರ್ಷವಾದರೂ ಕಡ್ಡಾಯವಾಗಿ ಸಂಘದ ಉಪವಿಧಿಯಲ್ಲಿ ನಮೂದಿಸಿದ ಕನಿಷ್ಟ ವ್ಯವಹಾರವನ್ನು ಮಾಡಿದ ಸದಸ್ಯರು ಮೃತರಾದಲ್ಲಿ ಅವರ ಅಂತ್ಯ ಸಂಸ್ಕಾರಕ್ಕೆ, ಅವರ ನಾಮಿನಿ/ವಾರಸುದಾರರಿಗೆ ಸಂಘದಿಂದ 5,000.00 ಆರ್ಥಿಕ ನೆರವನ್ನು ನೀಡಲಾಗುತ್ತದೆ.