ನಾವು ನೀಡುವ ಸೇವೆ
ಮಾಮ್ ಕೋಸ್ ಸಂಸ್ಥೆಯು ತನ್ನ ಸದಸ್ಯರಿಗೆ ಈ ಕೆಳಕಂಡಂತೆ ವಿವಿಧ ಸೌಲಭ್ಯವನ್ನು ನೀಡುತ್ತಿದೆ.
- ಸಹಾಯ ಧನ
- ಬೋನಸ್ ನೀಡಿಕೆ
- ಗೋದಾಮು ಸೌಲಭ್ಯಗಳು
- ತಂತ್ರಜ್ಞಾನ ಸೌಲಭ್ಯಗಳು:
- ಗುರುತಿನ ಕಾರ್ಡ್ ಸೌಲಭ್ಯ
- ಮರಣೋತ್ತರ ನಿಧಿ ಯೋಜನೆ
- ವಿಮಾ ಸೌಲಭ್ಯಗಳು
ಸಹಾಯ ಧನ
ಸಂಘದಲ್ಲಿ ನಿರಂತರ ಅಡಿಕೆ ಹಾಕಿ ವ್ಯವಹಾರ ಮಾಡುತ್ತಿರುವ ಸದಸ್ಯರಿಗೆ ಈ ಕೆಳಕಂಡಂತೆ ಸಹಾಯಧನ ನೀಡಲಾಗುತ್ತಿದೆ.
ಸಹಾಯಧನ ವಿವರ | ಸಹಾಯಧನ ಮೊಬಲಗು |
ಅಸ್ತ್ರ ಒಲೆ ನಿರ್ಮಾಣಕ್ಕೆ | ರೂ.1000 /- |
ಗಟಾರ್ ಸ್ಪ್ರೇಯರ್ ಯಂತ್ರದ ನಿರ್ಮಾಣಕ್ಕೆ | ರೂ.1000 /- |
ಡ್ರೆಯರ್ ನಿರ್ಮಾಣಕ್ಕೆ | ರೂ.7000 /- |
ಬೋನಸ್ ನೀಡಿಕೆ
ಬೋನಸ್ ನೀಡಿಕೆ: ಸಂಘದ ಸದಸ್ಯರು ಸಂಘದ ಮೂಲಕ ಮಾರಾಟ ಮಾಡಿದ ಅಡಿಕೆ ಮಾರಾಟದ ಹಣದ
ಮೇಲೆ ಶೇ.೦.13 ರಷ್ಟು ಬೋನಸ್ ನೀಡಲಾಗುತ್ತಿದೆ.
ಗೋದಾಮು ಸೌಲಭ್ಯಗಳು
- ಸದಸ್ಯರ ಅಡಿಕೆಯನ್ನು ಉಚಿತವಾಗಿ ಒಂದು ವರ್ಷದ ಅವಧಿಗೆ ಸಂಗ್ರಹಿಸಿಡುವ ಸೌಲಭ್ಯ.
- ಸದಸ್ಯರು ಸ್ಪರ್ಧಾತ್ಮಕ ದರಗಳನ್ನು ಪಡೆಯಲು ಅನುವಾಗಲು ದಾಸ್ತಾನನ್ನು ಯಾವುದೇ ಶಾಖೆಯಿಂದ ಅವರು ಅಪೇಕ್ಷಿಸುವ ಬೇರೆ ಶಾಖೆಗಳಿಗೆ ವರ್ಗಾಯಿಸಿ ಕೊಡುವ ಸೌಲಭ್ಯ.
- ಸಂಘದ ಶಿವಮೊಗ್ಗ, ಭದ್ರಾವತಿ, ಚನ್ನಗಿರಿ, ತರಿಕೆರೆ ಮತ್ತು ಕೊಪ್ಪ ಶಾಖೆಗಳಲ್ಲಿ ಅಡಿಕೆ ಸ್ವಚ್ಛಗೊಳಿಸುವ ಯಂತ್ರವನ್ನು ಅಳವಡಿಸಿದ್ದು, ಉಳಿದ
ಶಾಖೆಗಳಲ್ಲಿಯೂ ಸಹ ಅಳವಡಿಸಲು ಉದ್ದೇಶಿಸಿದೆ. - ಸಂಘದ ಶಿವಮೊಗ್ಗ, ಸಾಗರ, ಕೊಪ್ಪ ಮತ್ತು ಹೊಸನಗರ, ಶಿವಮೊಗ್ಗ ನೇರ ಖರೀದಿ ಕೇಂದ್ರ, ತೀರ್ಥಹಳ್ಳಿ, ಶಾಖೆಗಳಲ್ಲಿ ಗೂಡ್ಸ್ ಲಿಫ್ಟ್
ಅಳವಡಿಸಿದ್ದು, ಅವಶ್ಯವಿರುವ ಉಳಿದ ಶಾಖೆಗಳಲ್ಲಿಯೂ ಗೂಡ್ಸ್ ಲಿಫ್ಟ್ ಅಳವಡಿಸಲು ಉದ್ದೇಶಿಸಿದೆ.
ತಂತ್ರಜ್ಞಾನ ಸೌಲಭ್ಯಗಳು:
- ಸಂಘದ ಎಲ್ಲಾ ವ್ಯವಹಾರವನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸಲಾಗಿದೆ.
- ಕ್ಷೇತ್ರದಲ್ಲಿನ ಇತ್ತೀಚಿನ ಮಾಹಿತಿಯನ್ನು ನೀಡಲು ಅನುವಾಗುವಂತೆ “ಅಡಿಕೆ ತಂತ್ರಜ್ಞಾನ ಮತ್ತು ಮಾರುಕಟ್ಟೆ ಮಾಹಿತಿ ಕೇಂದ್ರ”ವನ್ನು ಕೇಂದ್ರ
ಕಛೇರಿಯಲ್ಲಿ ಸ್ಥಾಪಿಸಲಾಗಿದೆ. - ಸಂಘವು ತನ್ನದೇ ಆದ MAMCOS ಎಂಬ ಮೊಬೈಲ್ App ಹೊಂದಿದ್ದು ಸದಸ್ಯರು ತಮ್ಮ ನೊಂದಾಯಿತ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಿ ಶಾಖೆಗಳಲ್ಲಿನ ತಮ್ಮ ವ್ಯವಹಾರದ ಮಾಹಿತಿಯನ್ನು ನೋಡಬಹುದಾಗಿದೆ ಹಾಗೂ ತಮ್ಮ ಖಾತೆಯಲ್ಲಿರುವ ಅಡಿಕೆಯನ್ನು ವ್ಯಾಪಾರಕ್ಕೆ (e-tender) ಗೆ ಹಾಕಬಹುದಾಗಿರುತ್ತದೆ.
- ಸಂಘವು ತನ್ನದೇ ಆದ
https://mamcos.info
ವೆಬ್ ಸೈಟ್ನ್ನು ಹೊಂದಿರುತ್ತದೆ.
ಗುರುತಿನ ಕಾರ್ಡ್ ಸೌಲಭ್ಯ
ಸದಸ್ಯರಿಗೆ ಭಾವಚಿತ್ರ ಸಹಿತ ಗುರುತಿನ ಕಾರ್ಡ್ (ಸ್ಮಾರ್ಟ್ ಕಾರ್ಡ್) ನೀಡಲಾಗುತ್ತಿದೆ. ಈ ಸ್ಮಾರ್ಟ್ ಕಾರ್ಡ್ ಸಂಘದಲ್ಲಿ ವ್ಯವಹರಿಸಲು, ವಿವಿಧ
ಸೌಲಭ್ಯಗಳನ್ನು ತ್ವರಿತವಾಗಿ ಪಡೆಯಲು, ವಾರ್ಷಿಕ ಮಹಾಸಭೆಗಳಲ್ಲಿ ಭಾಗವಹಿಸಲು ಹಾಗೂ ಚುನಾವಣೆಯಲ್ಲಿ ಮತ ಚಲಾಯಿಸಲು ಕಡ್ಡಾಯವಾಗಿರುತ್ತದೆ.
ಮರಣೋತ್ತರ ನಿಧಿ ಯೋಜನೆ
6೦ ವರ್ಷದೊಳಗಿನ ಸಂಘದ ಸದಸ್ಯರು ರೂ.3,೦೦೦, ರೂ.5,೦೦೦ ಹಾಗೂ ರೂ.1೦,೦೦೦ ಸ್ಲಾಬ್‘ಗಳಲ್ಲಿ ಆಯ್ಕೆ ಮಾಡಿ ನೋಂದಾಯಿಸಿದಲ್ಲಿ, ತಮ್ಮ ನಂತರ ನಾಮಿನಿ/ವಾರಸುದಾರರಿಗೆ ಕ್ರಮವಾಗಿ ರೂ.15,೦೦೦, ರೂ.25,೦೦೦ ಹಾಗೂ ರೂ.5೦,೦೦೦ವನ್ನು “ಮರಣೋತ್ತರ ನಿಧಿ ಯೋಜನೆ––II” ರಲ್ಲಿ ಹಲವು ನಿಬಂಧನೆಗೆ ಒಳಪಟ್ಟು ನೀಡಲಾಗುತ್ತಿದೆ.
ಗುಂಪು ವಿಮಾ ಯೋಜನೆ:
`ಮಾಮ್ಕೋಸ್’ ಸಂಸ್ಥೆಯು ತನ್ನ ಸದಸ್ಯರಿಗಾಗಿ `ಗುಂಪು ವಿಮಾ ಅಭಿರಕ್ಷೆ ಯೋಜನೆ’ ಅನ್ನು ಜಾರಿಗೆ ತಂದಿದ್ದು, ಇದರಲ್ಲಿ ಸದಸ್ಯರು ಸಂಘದ ಶಾಖೆಗಳ ಮೂಲಕ ವಂತಿಕೆ ಮೊಬಲಗನ್ನು ಪಾವತಿಸಿದರೆ ಆ ಸದಸ್ಯರಿಗೆ ಮತ್ತು ಅವರ ಹೆಸರಿಸದ ಅವಲಂಬಿತ ಕೂಲಿ ಕಾರ್ಮಿಕರುಗಳಿಗೆ ಹಾಗೂ ಕುಟುಂಬದ ಸದಸ್ಯರಿಗೆ ವಿಮೆ ಮಾಡಲಾಗುವುದು (ತಲಾ.575.00 ನ್ನು ಪಾವತಿಸಿ ಅನಿಯಮಿತ ಜನ ಕೂಲಿ ಕಾರ್ಮಿಕರನ್ನು ನೋಂದಾಯಿಸಲು ಅವಕಾಶವನ್ನು ಕಲ್ಪಿಸಲಾಗಿದೆ) 2023-24 ಸಾಲಿನಲ್ಲಿ ಈ ಯೋಜನೆ ಅಡಿಯಲ್ಲಿ 64 ಪ್ರಕರಣಗಳಲ್ಲಿ ರೂ.64,06,801.00 ಪರಿಹಾರ ನೀಡಲಾಗಿದೆ..
ಹಂತ | ವಿಮಾಕಂತು ಸಂಗ್ರಹಿಸುವ ಅವಧಿ | ಯೋಜನೆ ಚಾಲ್ತಿಯಲ್ಲಿರುವ ಅವಧಿ |
ಒಂದನೇ ಹಂತ | 01/04/2024 ರಿಂದ 29/05/2024 | 01/06/2024 ರಿಂದ 31/05/2025 |
ಎರಡನೇ ಹಂತ | 01/10/2024 ರಿಂದ 27/11/2024 | 01/12/2024 ರಿಂದ 30/11/2025 |
ವಿಮಾಕಂತು (ಪ್ರೀಮಿಯಂ) ಹಾಗೂ ಪರಿಹಾರದ ವಿವರ:
ಕ್ರ.ಸಂ | ವಯೋಮಿತಿ | ಪರಿಹಾರದ ಮೊತ್ತ | ವಿಮಾಕಂತು ಮೊಬಲಗು |
01 | 70 ವರ್ಷದೊಳಗಿನವರಿಗೆ (ಸದಸ್ಯರು ಹಾಗೂ ಅವರ ಹೆಸರಿಸದ ಅವಲಂಬಿತ ಕೂಲಿ ಕಾರ್ಮಿಕ) |
|
ರೂ.1150 |
02 | 71-80 ವರ್ಷದೊಳಗಿನವರಿಗೆ (ಸದಸ್ಯರಿಗೆ ಮಾತ್ರ 71-80 ವರ್ಷ ಮತ್ತು ಅವರ ಹೆಸರಿಸದ ಅವಲಂಬಿತ ಕೂಲಿ ಕಾರ್ಮಿಕರು 70 ವರ್ಷದೊಳಗಿನವರಿರಬೇಕು) |
|
ರೂ.1050 |
03 | 81-90 ವರ್ಷದೊಳಗಿನವರಿಗೆ (ಸದಸ್ಯರಿಗೆ ಮಾತ್ರ 81-90 ವರ್ಷ ಮತ್ತು ಅವರ ಹೆಸರಿಸದ ಅವಲಂಬಿತ ಕೂಲಿ ಕಾರ್ಮಿಕರು 70 ವರ್ಷದೊಳಗಿನವರಿರಬೇಕು) |
|
ರೂ.990 |
04 | ಸದಸ್ಯರ ಕುಟುಂಬಕ್ಕೆ (70 ವರ್ಷದೊಳಗಿನ ಸದಸ್ಯರ ಗಂಡ/ ಹೆಂಡತಿ/ ಮಗ/ಸೊಸೆ/ ಅವಿವಾಹಿತ ಮಗಳು) |
|
ರೂ.170 ತಲಾ ಒಬ್ಬರಿಗೆ |
ಆರೋಗ್ಯ ವಿಮೆ:
ಸಂಘದ ಸದಸ್ಯರು ಹಾಗೂ ಅವರ ಕುಟುಂಬ ಸದಸ್ಯರಿಗೆ ಐಸಿಐಸಿಐ ವಿಮಾ ಕಂಪನಿಯೊಂದಿಗೆ ಸೇರಿ ಆರೋಗ್ಯ ವಿಮೆಯನ್ನು ಜಾರಿಗೊಳಿಸಿದೆ. ಆಯಾ ವಯೋಮಿತಿಗನುಗುಣವಾಗಿ ವಿಮಾ ಕಂತನ್ನು ಪಾವತಿಸಿ ವಿಮಾ ಪಾಲಿಸಿ ಪಡೆಯಬಹುದಾಗಿದೆ.