ಮಾಮ್‌ಕೋಸ್ ವಾರ್ಷಿಕ ಸಭೆ 2026: ಊಟ, ಪೀಠೋಪಕರಣ ಹಾಗೂ ಶ್ಯಾಮಿಯಾನ ಸರಬರಾಜಿಗೆ ಟೆಂಡರ್ ಆಹ್ವಾನ

ಟೆಂಡರ್ ಪ್ರಕಟಣೆ

ದಿನಾಂಕ: 30 ಆಗಸ್ಟ್ 2026 ರಂದು ನಡೆಯಲಿರುವ ಸಂಘದ 86 ನೇ ವಾರ್ಷಿಕ ಸಾಮಾನ್ಯ ಸಭೆಗೆ ಸಂಬಂಧಿಸಿದಂತೆ ಊಟ, ತಿಂಡಿ, ಕಾಫಿಯನ್ನು ಸರಬರಾಜು ಮಾಡಲು ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ. ಈ ಸಂಬಂಧ ನಿಗದಿಪಡಿಸಿದ ಮಾನದಂಡಗಳನ್ವಯ ಅರ್ಹತೆ ಹೊಂದಿರುವ ಆಸಕ್ತದಾರರು ಟೆಂಡರ್ ಅರ್ಜಿಗಳನ್ನು ಶಿವಮೊಗ್ಗ ಎ.ಪಿ.ಎಂ.ಸಿ. ಆವರಣದಲ್ಲಿರುವ ಸಂಘದ ಕೇಂದ್ರ ಕಛೇರಿಯಿಂದ ಕಛೇರಿ ವೇಳೆಯಲ್ಲಿ ಪಡೆಯಬಹುದಾಗಿರುತ್ತದೆ. ಪೂರ್ಣಗೊಳಿಸಿದ ಟೆಂಡರ್ ಫಾರಂಗಳನ್ನು ದಿನಾಂಕ: 08-08-2026 ರ ಸಂಜೆ 5.30 ರೊಳಗೆ ವ್ಯವಸ್ಥಾಪಕ ನಿರ್ದೇಶಕರು, ಮಾಮ್‌ಕೋಸ್ ನಿ., ಎ.ಪಿ.ಎಂ.ಸಿ. ಆವರಣ, ಸಾಗರ ರಸ್ತೆ, ಶಿವಮೊಗ್ಗ ಇವರಿಗೆ ಸಲ್ಲಿಸತಕ್ಕದ್ದು.

ಸಹಿ/- ವ್ಯವಸ್ಥಾಪಕ ನಿರ್ದೇಶಕರು