ಮಾಮ್‌ಕೋಸ್
MAMCOS
ಮಾಮ್‌ಕೋಸ್ ಗೆ ಸುಸ್ವಾಗತ — 1939 ರಿಂದ ನಿರಂತರ ನಿಮ್ಮ ಸೇವೆಯಲ್ಲಿ
MAMCOS Head Office

ಮಾಮ್‌ಕೋಸ್

Established 1939

ನಮ್ಮ ಹಿನ್ನೆಲೆ (Our Legacy)

ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತ, ಶಿವಮೊಗ್ಗ.

ಸಂಕ್ಷಿಪ್ತದಲ್ಲಿ “ಮಾಮ್‌ಕೋಸ್” ಎಂದೇ ಪ್ರಸಿದ್ಧ. ಅಂದಿನ ಶಿವಮೊಗ್ಗ ಜಿಲ್ಲಾಧಿಕಾರಿಗಳಾಗಿದ್ದ ಮಾನ್ಯ ಶ್ರೀ ಎಂ. ಶೇಷಾದ್ರಿಯವರ ಅಧ್ಯಕ್ಷತೆಯಲ್ಲಿ ಅಡಿಕೆ ಬೆಳೆಗಾರರ ಹಿತವನ್ನು ಕಾಯುವ ಉದ್ದೇಶದಿಂದ, ಈ ಸಂಘವನ್ನು ದಿನಾಂಕ 08-11-1939 ರಂದು ಸ್ಥಾಪಿಸಲಾಯಿತು.

ಪ್ರಾರಂಭದಲ್ಲಿ ಕೇವಲ 659 ಜನ ಸದಸ್ಯರಿದ್ದ ಸಂಘವು, ಇಂದು 30,634ಕ್ಕೂ ಹೆಚ್ಚು ಸದಸ್ಯರೊಂದಿಗೆ ಸದೃಢ ಆರ್ಥಿಕ ತಳಹದಿಯನ್ನು ಹೊಂದಿರುತ್ತದೆ. ಸ್ಥಾಪನೆಯ ವರ್ಷದಿಂದ ಇಲ್ಲಿಯವರೆಗೆ ನಿರಂತರವಾಗಿ ಲಾಭದಲ್ಲೇ ಕಾರ್ಯ ನಿರ್ವಹಿಸುತ್ತಿರುವ ಹೆಗ್ಗಳಿಕೆಯನ್ನು ಸಂಸ್ಥೆಯು ಹೊಂದಿದೆ.

30K+

ಸದಸ್ಯರು

17

ತಾಲ್ಲೂಕುಗಳು

85+

ವರ್ಷಗಳ ಸೇವೆ

ಮುಖ್ಯ ಉದ್ದೇಶಗಳು

  • ಅಡಿಕೆ ಮತ್ತು ಇತರೆ ಉಪ ಬೆಳೆಗಳ ಮಾರಾಟಕ್ಕಾಗಿ ವ್ಯವಸ್ಥಿತ ಮಾರುಕಟ್ಟೆ ಸೌಲಭ್ಯ.
  • ಉತ್ಪನ್ನಗಳಿಗೆ ಸುರಕ್ಷಿತ ಸಂಗ್ರಹಣೆ ಮತ್ತು ಒಪ್ಪಿದ ಬೆಲೆಗೆ ಮಾರಾಟ.
  • ಕಟಾವು ಸಾಲ ಮತ್ತು ಉತ್ಪನ್ನಗಳ ಮೇಲೆ ಮುಂಗಡ ಹಣ ಪಾವತಿ.

ಆಡಳಿತ ವ್ಯಾಪ್ತಿ

ಸಂಘವು ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಎಲ್ಲಾ ತಾಲ್ಲೂಕುಗಳು ಮತ್ತು ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕುಗಳನ್ನು ಸೇರಿ ಒಟ್ಟು 17 ತಾಲ್ಲೂಕುಗಳ ವ್ಯಾಪ್ತಿಯನ್ನು ಹೊಂದಿದೆ.

ಕೈವ್ಯಾಪಾರವನ್ನು ಉತ್ತೇಜಿಸದಿರಿ

ಸಂಘಕ್ಕೆ ಹಾಕಿದ ಅಡಿಕೆಯನ್ನು ಸಂಘದಲ್ಲಿಯೇ ಮಾರಾಟ ಮಾಡಿ

ಬೆಳೆಗಾರರ ಹಿತವೇ ನಮ್ಮ ಪ್ರಮುಖ ಧ್ಯೇಯ