ಮಾಮ್‌ಕೋಸ್
MAMCOS
ಮಾಮ್‌ಕೋಸ್ ಗೆ ಸುಸ್ವಾಗತ — 1939 ರಿಂದ ನಿರಂತರ ನಿಮ್ಮ ಸೇವೆಯಲ್ಲಿ

ಪಾರಿತೋಷಕ ಬಹುಮಾನ ನೀಡಿಕೆ

ಸದಸ್ಯರ ಮಕ್ಕಳಿಗೆ ನೀಡಲಾಗುವ ಪ್ರೋತ್ಸಾಹಧನ ಪಾರಿತೋಷಕ ಬಹುಮಾನಗಳು

ಪಾರಿತೋಷಕ ಬಹುಮಾನ ಯೋಜನೆ

ಸದಸ್ಯರ ಮಕ್ಕಳಲ್ಲಿ ಎಸ್.ಎಸ್.ಎಲ್.ಸಿ., ಪಿ.ಯೂ.ಸಿ., ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಾಲ್ಲೂಕಿಗೆ ಒಬ್ಬರಂತೆ ತಲಾ ₹5,000.00 ಮತ್ತು ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ತಲಾ ₹6,000.00 ಹಾಗೂ ಜಿ.ಡಿ.ಸಿ. ತರಬೇತಿ ಪಡೆದ ಪ್ರತಿ ತಂಡದಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ತಲಾ ₹4,000.00 ಪ್ರೋತ್ಸಾಹಧನ ಪ್ರತಿ ವರ್ಷ ನೀಡಲಾಗುತ್ತಿದೆ.

ಎಸ್.ಎಸ್.ಎಲ್.ಸಿ. / ಪಿ.ಯೂ.ಸಿ.

ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ

₹5,000.00 (ತಾಲ್ಲೂಕಿಗೆ ಒಬ್ಬರಂತೆ)

ಪದವಿ / ಸ್ನಾತಕೋತ್ತರ ಪದವಿ

ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ

₹6,000.00 (ತಲಾ)

ಜಿ.ಡಿ.ಸಿ. ತರಬೇತಿ

ಪ್ರತಿ ತಂಡದಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ

₹4,000.00 (ತಲಾ)

• 2024-25 ನೇ ಸಾಲಿನಲ್ಲಿ 61 ಪ್ರತಿಭೆಗಳಿಗೆ ರೂ.3,26,000/- ಪಾವತಿಸಿದೆ.

• ಈ ಬಾರಿಯೂ ಸಹ ಸೆಪ್ಟೆಂಬರ್ 30 ರ ಒಳಗೆ ಪಾರಿತೋಷಕ ಬಹುಮಾನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಹೆಚ್ಚಿನ ವಿವರಗಳಿಗೆ ಕೇಂದ್ರ ಕಛೇರಿ, ಹತ್ತಿರದ ಶಾಖೆ ಅಥವಾ ಏಜೆನ್ಸಿಯನ್ನು ಸಂಪರ್ಕಿಸಿ.