1939 ರಿಂದ ನಿರಂತರ ನಿಮ್ಮ ಸೇವೆಯಲ್ಲಿ
ಸಹಕಾರ ಸಂಘದ ಶ್ರೇಷ್ಠತೆಯ ಪ್ರತೀಕ
ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತ
Malnad Areca Marketing Co-operative Society Limited
call 08182-250513 250514 email ho@mamcos.info
location_on ಎ.ಪಿ.ಎಂ.ಸಿ ಯಾರ್ಡ್, ಸಾಗರ ರಸ್ತೆ, ಶಿವಮೊಗ್ಗ - 577204
Yellow Leaf Disease in Areca
ಕೇರಳ ಮತ್ತು ಕರ್ನಾಟಕದ ದಕ್ಷಿಣ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡಿರುವ ಪ್ರಮುಖ ರೋಗ.
ಹಳದಿ ಎಲೆ ರೋಗ ಅಡಿಕೆಯಲ್ಲಿ ಬರುವ ಪ್ರಮುಖ ರೋಗವಾಗಿದ್ದು, ಕೇರಳದ ಎಲ್ಲಾ ಅಡಿಕೆ ಬೆಳೆಯುವ ಜಿಲ್ಲೆಗಳಲ್ಲಿ ಮತ್ತು ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಚಿಕ್ಕಮಂಗಳೂರು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡಿದೆ. ಈ ರೋಗವು ಎಲ್ಲಾ ತರಹದ ಮಣ್ಣುಗಳಲ್ಲಿ ಅತಿ ತೀವ್ರವಾಗಿ ಹರಡುತ್ತದೆ ಮತ್ತು ಇಳುವರಿಯ ಗಣನೀಯ ಕುಸಿತಕ್ಕೆ ಕಾರಣವಾಗುತ್ತದೆ.
ರೋಗ ಪೀಡಿತ ಮರಗಳ ತಿರಿಭಾಗದ ಗಾತ್ರ ಕಡಿಮೆಯಾಗುತ್ತದೆ.
ಎಲೆಗಳ ಅಂಚು ಹಳದಿ ಬಣ್ಣಕ್ಕೆ ತಿರುಗಿ ನಂತರ ಪೂರ್ತಿ ಎಲೆಯು ಹಳದಿ-ಹಸಿರು ಪಟ್ಟಿಗಳಿಂದ ಮಿಶ್ರಿತವಾಗಿರುತ್ತದೆ.
ಬಾಧೆಗೊಳಗಾದ ಕಾಯಿಗಳ ತಿರುಳು ಮೊದಲು ಕಂದು, ನಂತರ ಕಪ್ಪು ಬಣ್ಣಕ್ಕೆ ತಿರುಗಿ ತಿನ್ನಲು ಯೋಗ್ಯವಾಗಿರುವುದಿಲ್ಲ.
ಹಳೆಯ ಬೇರುಗಳ ತುದಿಯು ಗಡುಸಾಗಿ ಕಪ್ಪು ಬಣ್ಣಕ್ಕೆ ತಿರುಗಿ ಕೊಳೆಯುತ್ತವೆ.
ರೋಗ ಪೀಡಿತ ಮರಗಳಲ್ಲಿ ಹೊಸಬೇರುಗಳ ಬೆಳವಣಿಗೆ ಕುಂಠಿತವಾಗುತ್ತದೆ.
ನೀರು ಮತ್ತು ಆಹಾರವನ್ನು ಹೀರುವ ತುಂತುರು ಬೇರುಗಳ ಸಂಖ್ಯೆ ಕಡಿಮೆ ಇರುತ್ತದೆ.
ಈ ರೋಗವು ಫೈಟೊಪ್ಲಾಸ್ಮ (Phytoplasma) ಎಂಬ ರೋಗಾಣುವಿನಿಂದ ಬರುತ್ತದೆ. ಜಿಗಿಹುಳುವಾದ ಪ್ರೌಟಿಸ್ಟಾ ಮೊಯಿಸ್ಟಾ (Proutista moesta) ಈ ರೋಗದ ಹರಡುವಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
Step 1
ಬೇಸಿಗೆಯಲ್ಲಿ ನೀರು ಉಣಿಸುವುದಲ್ಲದೆ, ಮಳೆಗಾಲದ ಸಮಯದಲ್ಲಿ ನೀರು ನಿಲ್ಲದಂತೆ ಬಸಿಗಾಲುವೆ ವ್ಯವಸ್ಥೆ ಮಾಡುವುದು.
Step 2
ಶಿಫಾರಸ್ಸು ಮಾಡಿದ ರಸಗೊಬ್ಬರಗಳನ್ನು ಹಾಗೂ ಲಘುಪೋಷಕಾಂಶಗಳನ್ನು ಒದಗಿಸುವುದು.
Step 3
ಮುಂಗಾರಿನಲ್ಲಿ ಪ್ರತಿ ಮರಕ್ಕೆ 15-20 ಕೆ.ಜಿ. ಕೊಟ್ಟಿಗೆ ಗೊಬ್ಬರವನ್ನು ಟ್ರೈಕೋಡರ್ಮಾ ಮತ್ತು ಸುಡೊಮೊನಾಸ್ ಜೈವಿಕ ಸೂಕ್ಷ್ಮಾಣುಗಳೊಂದಿಗೆ ಮಿಶ್ರಣ ಮಾಡಿ ಭೂಮಿಗೆ ಸೇರಿಸಬೇಕು.
Step 4
ಫಲ ಬಿಡುವ ಪ್ರತಿ ಮರಕ್ಕೆ ವರ್ಷಕ್ಕೆ 100 ಗ್ರಾಂ ಸಾರಜನಕ, 40 ಗ್ರಾಂ ರಂಜಕ ಮತ್ತು 140 ಗ್ರಾಂ ಪೊಟ್ಯಾಷ್ — 2 ಸಮ ಭಾಗಗಳಲ್ಲಿ ಫೆಬ್ರವರಿ-ಮಾರ್ಚ್ ಮತ್ತು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ.
Step 5
1 ಕೆ.ಜಿ. ಫಾಸ್ಫೇಟ್ ಗೊಬ್ಬರ ಮತ್ತು 2 ಕೆ.ಜಿ. ಬೇವಿನ ಹಿಂಡಿಯನ್ನು 2 ಸಮ ಕಂತುಗಳಲ್ಲಿ ಕೊಡಬೇಕು.
Step 6
ಅಲಸಂದಿ ಅಥವಾ ಇನ್ನಿತರ ಹಸಿರೆಲೆ ಬೆಳೆಗಳನ್ನು ಗಿಡಗಳ ನಡುವೆ ಬೆಳೆಯುವುದು.
Step 7
ಜಿಗಿಹುಳುಗಳ ನಿರ್ವಹಣೆಗೆ ಸೂಕ್ತ ಕೀಟ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು.
Step 8
ರೋಗ ಪ್ರಾರಂಭದ ಹಂತದಲ್ಲಿದ್ದರೆ ರೋಗ ಹರಡುವುದನ್ನು ತಡೆಯಲು ರೋಗ ಕಾಣಿಸಿಕೊಂಡ ಮರಗಳನ್ನು ತೆಗೆದು ನಾಶಮಾಡಬೇಕು.