1939 ರಿಂದ ನಿರಂತರ ನಿಮ್ಮ ಸೇವೆಯಲ್ಲಿ
ಸಹಕಾರ ಸಂಘದ ಶ್ರೇಷ್ಠತೆಯ ಪ್ರತೀಕ
ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತ
Malnad Areca Marketing Co-operative Society Limited
call 08182-250513 250514 email ho@mamcos.info
location_on ಎ.ಪಿ.ಎಂ.ಸಿ ಯಾರ್ಡ್, ಸಾಗರ ರಸ್ತೆ, ಶಿವಮೊಗ್ಗ - 577204
ಮಾಮ್‌ಕೋಸ್ ಸಂಸ್ಥೆಯು ತನ್ನ ಸದಸ್ಯರಿಗೆ ನೀಡುತ್ತಿರುವ ವಿವಿಧ ಸೌಲಭ್ಯಗಳ ಮಾಹಿತಿ
ಸಂಘದಲ್ಲಿ ನಿರಂತರ ಅಡಿಕೆ ಹಾಕಿ ವ್ಯವಹಾರ ಮಾಡುತ್ತಿರುವ ಸದಸ್ಯರಿಗೆ ಈ ಕೆಳಕಂಡಂತೆ ಸಹಾಯಧನ ನೀಡಲಾಗುತ್ತಿದೆ:
| ಸಹಾಯಧನ ವಿವರ | ಸಹಾಯಧನ ಮೊಬಲಗು |
|---|---|
| ಅಸ್ತ್ರ ಒಲೆ ನಿರ್ಮಾಣಕ್ಕೆ | ರೂ. 2000 /- |
| ಗಟಾರ್ ಸ್ಪ್ರೇಯರ್ ಯಂತ್ರಕ್ಕೆ | ರೂ. 2000 /- |
| ಡ್ರೈಯರ್ ನಿರ್ಮಾಣಕ್ಕೆ | ರೂ. 10000 /- |
| ಪವರ್ ಸ್ಪ್ರೇಯರ್ | ರೂ. 5000 /- |
• ಮೇಲ್ಕಂಡಂತೆ ಸಹಾಯಧನ ಪಡೆಯಲು ಹಿಂದಿನ ವರ್ಷಗಳಲ್ಲಿ ಸಂಘವು ನಿಗಧಿಪಡಿಸಿದಂತೆ ವ್ಯವಹಾರ ಮಾಡಿರಬೇಕಾಗುತ್ತದೆ.
ಸಂಘದ ಸದಸ್ಯರು ಸಂಘದ ಮೂಲಕ ಮಾರಾಟ ಮಾಡಿದ ಅಡಿಕೆ ಮಾರಾಟದ ಹಣದ ಮೇಲೆ ಬೋನಸ್ ನೀಡಲಾಗುತ್ತಿದೆ.
• ಸದಸ್ಯರ ಅಡಿಕೆಯನ್ನು ಉಚಿತವಾಗಿ ಒಂದು ವರ್ಷದ ಅವಧಿಗೆ ಸಂಗ್ರಹಿಸಿಡುವ ಸೌಲಭ್ಯ.
• ಸದಸ್ಯರು ಸ್ಪರ್ಧಾತ್ಮಕ ದರಗಳನ್ನು ಪಡೆಯಲು ಅನುವಾಗಲು ದಾಸ್ತಾನನ್ನು ಯಾವುದೇ ಶಾಖೆಯಿಂದ ಅವರು ಅಪೇಕ್ಷಿಸುವ ಬೇರೆ ಶಾಖೆಗಳಿಗೆ ವರ್ಗಾಯಿಸಿ ಕೊಡುವ ಸೌಲಭ್ಯ.
ಸಂಘದ ಸಾಗರ, ಹೊಸನಗರ, ಶಿವಮೊಗ್ಗ, ಭದ್ರಾವತಿ, ಚನ್ನಗಿರಿ, ತರಿಕೆರೆ ಮತ್ತು ಕೊಪ್ಪ ಶಾಖೆಗಳಲ್ಲಿ ಅಡಿಕೆ ಸ್ವಚ್ಛಗೊಳಿಸುವ ಯಂತ್ರವನ್ನು ಅಳವಡಿಸಿದ್ದು, ಉಳಿದ ಶಾಖೆಗಳಲ್ಲಿಯೂ ಸಹ ಅಳವಡಿಸಲು ಉದ್ದೇಶಿಸಿದೆ.
ಸಂಘದ ಶಿವಮೊಗ್ಗ, ಸಾಗರ, ಕೊಪ್ಪ ಮತ್ತು ಹೊಸನಗರ, ಶಿವಮೊಗ್ಗ ನೇರ ಖರೀದಿ ಕೇಂದ್ರ, ತೀರ್ಥಹಳ್ಳಿ ಶಾಖೆಗಳಲ್ಲಿ ಗೂಡ್ಸ್ ಲಿಫ್ಟ್ ಅಳವಡಿಸಿದ್ದು, ಅವಶ್ಯವಿರುವ ಉಳಿದ ಶಾಖೆಗಳಲ್ಲಿಯೂ ಗೂಡ್ಸ್ ಲಿಫ್ಟ್ ಅಳವಡಿಸಲು ಉದ್ದೇಶಿಸಿದೆ.
• ಸಂಘದ ಎಲ್ಲಾ ವ್ಯವಹಾರವನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸಲಾಗಿದೆ.
• ಕ್ಷೇತ್ರದಲ್ಲಿನ ಇತ್ತೀಚಿನ ಮಾಹಿತಿಯನ್ನು ನೀಡಲು ಅನುವಾಗುವಂತೆ “ಅಡಿಕೆ ತಂತ್ರಜ್ಞಾನ ಮತ್ತು ಮಾರುಕಟ್ಟೆ ಮಾಹಿತಿ ಕೇಂದ್ರ”ವನ್ನು ಕೇಂದ್ರ ಕಛೇರಿಯಲ್ಲಿ ಸ್ಥಾಪಿಸಲಾಗಿದೆ.
ಸಂಘವು ತನ್ನದೇ ಆದ MAMCOS ಎಂಬ ಮೊಬೈಲ್ App ಹೊಂದಿದ್ದು ಸದಸ್ಯರು ತಮ್ಮ ನೊಂದಾಯಿತ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಿ ಶಾಖೆಗಳಲ್ಲಿನ ತಮ್ಮ ವ್ಯವಹಾರದ ಮಾಹಿತಿಯನ್ನು ನೋಡಬಹುದಾಗಿದೆ ಹಾಗೂ ತಮ್ಮ ಖಾತೆಯಲ್ಲಿರುವ ಅಡಿಕೆಯನ್ನು ವ್ಯಾಪಾರಕ್ಕೆ (e-tender) ಗೆ ಹಾಕಬಹುದಾಗಿರುತ್ತದೆ.
ಅಧಿಕೃತ ವೆಬ್‌ಸೈಟ್: MAMCOS.INFO
ಸದಸ್ಯರಿಗೆ ಭಾವಚಿತ್ರ ಸಹಿತ ಗುರುತಿನ ಕಾರ್ಡ್ (ಸ್ಮಾರ್ಟ್ ಕಾರ್ಡ್) ನೀಡಲಾಗುತ್ತಿದೆ. ಈ ಸ್ಮಾರ್ಟ್ ಕಾರ್ಡ್ ಸಂಘದಲ್ಲಿ ವ್ಯವಹರಿಸಲು, ವಿವಿಧ ಸೌಲಭ್ಯಗಳನ್ನು ತ್ವರಿತವಾಗಿ ಪಡೆಯಲು, ವಾರ್ಷಿಕ ಮಹಾಸಭೆಗಳಲ್ಲಿ ಭಾಗವಹಿಸಲು ಹಾಗೂ ಚುನಾವಣೆಯಲ್ಲಿ ಮತ ಚಲಾಯಿಸಲು ಕಡ್ಡಾಯವಾಗಿರುತ್ತದೆ.