ಮಾಮ್‌ಕೋಸ್
MAMCOS
ಮಾಮ್‌ಕೋಸ್ ಗೆ ಸುಸ್ವಾಗತ — 1939 ರಿಂದ ನಿರಂತರ ನಿಮ್ಮ ಸೇವೆಯಲ್ಲಿ
ಅಂತರ ಬೆಳೆ · Intercropping

ಅಡಿಕೆಯಲ್ಲಿ ಅಂತರ ಹಾಗೂ ಮಿಶ್ರಬೆಳೆ ಪದ್ಧತಿ

Intercropping & Mixed Cropping in Areca

ಅಡಿಕೆ ಬೆಳೆಯಲ್ಲಿ ನಿರಂತರ ಆದಾಯ ಮತ್ತು ಮಣ್ಣಿನ ಫಲವತ್ತತೆಗಾಗಿ ಸೂಕ್ತ ಮಿಶ್ರಬೆಳೆ ಪದ್ಧತಿ.

ಬಹು ಬೆಳೆ ಪದ್ಧತಿಯ ಅವಶ್ಯಕತೆ

  • ಇಳುವರಿ ಪ್ರಾರಂಭವಾಗಲು ಅಧಿಕ ಅವಧಿ (5-7 ವರ್ಷ) ಬೇಕಾಗುತ್ತದೆ
  • ಪ್ರಾರಂಭದಲ್ಲಿ ಕಡಿಮೆ ಆದಾಯ
  • ಮಾರುಕಟ್ಟೆ ಬೆಲೆಯಲ್ಲಿ ವ್ಯತ್ಯಾಸ
  • ರೋಗ, ಕೀಟ ಹಾಗೂ ನೈಸರ್ಗಿಕ ದುರ್ಘಟನೆಯ ಅನಿರೀಕ್ಷಿತ ಹಾನಿ
  • ಕಡಿಮೆ ಭೂಮಿಯಲ್ಲಿ ಹೆಚ್ಚು ಬೆಳೆಗಳಿಂದ ಅಧಿಕ ಆದಾಯ

ವೈಜ್ಞಾನಿಕ ಹಿನ್ನೆಲೆ

80%

ಬೇರುಗಳು ಮರದ ಬುಡದಿಂದ 75 ಸೆಂ.ಮೀ. ಒಳಗೆ

31%

2.7 × 2.7 ಮೀ ಅಂತರದಲ್ಲಿ ಭೂಮಿ ಬಳಕೆ

52-68%

14 ವರ್ಷದ ತೋಟ ಬಳಸುವ ಸೂರ್ಯಬೆಳಕು

95%

ಮಿಶ್ರ ಬೆಳೆಯಿಂದ ಸಂಭವ ಬಳಕೆ

Compatible Crops

ಪ್ರಮುಖ ಅಂತರ ಮತ್ತು ಮಿಶ್ರ ಬೆಳೆಗಳು

1. ಅಡಿಕೆ + ಬಾಳೆ

Banana

ಮೊದಲ 1-2 ವರ್ಷ ಅಡಿಕೆಗೆ ನೆರಳು ಒದಗಿಸುವುದರ ಜೊತೆಗೆ ಬಾಳೆಯಿಂದ ಆದಾಯ. 9 ಅಡಿ ಅಂತರದಲ್ಲಿ ನಂಜನಗೂಡು ರಸಬಾಳೆ, ಪುಟ್ಟಬಾಳೆ, ಕರಿಬಾಳೆ, ಏಲಕ್ಕಿಬಾಳೆ ತಳಿಗಳನ್ನು ನಾಟಿ ಮಾಡಬಹುದು. ಅಂಗಾಂಶ ಬಾಳೆಗೆ 200:100:300 ಗ್ರಾಂ ಸಾ:ರಂ:ಪೊ.

2. ಅಡಿಕೆ + ಪಪಾಯ

Papaya

ಶೀಘ್ರ ಫಲ ಕೊಡುವ ಬೆಳೆ. ರೆಡ್ ಲೇಡಿ, ವೆಲ್‌ಕಂ, ಅರ್ಕ ಸೂರ್ಯ, ಅರ್ಕ ಪ್ರಭಾತ್, ಸೋಲೊ, ವಾಷಿಂಗ್ಟನ್ ತಳಿಗಳು. 9 ಅಡಿ ಅಂತರದಲ್ಲಿ ಜೂನ್-ಜುಲೈ ನಾಟಿ; 9-10 ತಿಂಗಳ ನಂತರ ಫಲ. ಪ್ರತಿ ಹೆಕ್ಟೇರಿಗೆ 75-100 ಟನ್ ಇಳುವರಿ.

3. ಅಡಿಕೆ + ನುಗ್ಗೆ

Drumstick

ಭಾಗ್ಯ, ಧನರಾಜ, PKM-1 ತಳಿಗಳು ಪ್ರಚಲಿತ. 9 ಅಡಿ ಅಂತರದಲ್ಲಿ ಜೂನ್-ಜುಲೈ ನಾಟಿ. ಗಿಡ್ಡ ತಳಿಗಳಲ್ಲಿ ಪ್ರತಿ ಗಿಡದಿಂದ ಎರಡು ವರ್ಷದ ನಂತರ 200-250 ಕಾಯಿ; ಎತ್ತರದ ತಳಿಗಳಿಂದ 75-100 ಕಾಯಿ.

4. ಅಡಿಕೆ + ಕರಿಮೆಣಸು

Black Pepper

ಫಣಿಯೂರ್ (1-8), ಕರಿಮುಂಡ, ಶ್ರೀಕರ, ಶುಭಕರ, ಪಂಚಮಿ, ಪೌರ್ಣಮಿ, ಶಕ್ತಿ, ತೇವಮ್, ಗಿರಿಮುಂಡ — ಅಡಿಕೆ ಮರಗಳಿಗೆ ಹಬ್ಬಿಸಿ ಬೆಳೆಸಲಾಗುತ್ತದೆ. ಪ್ರತಿ ಬಳ್ಳಿಗೆ 100:40:140 ಗ್ರಾಂ ರಸಗೊಬ್ಬರ. 5 ವರ್ಷಗಳ ನಂತರ ಪ್ರತಿ ಬಳ್ಳಿಯಿಂದ 1-2 ಕೆ.ಜಿ. ಒಣಮೆಣಸು.

5. ಅಡಿಕೆ + ಕೋಕೋ

Cocoa

ನಾಟಿಯ 8-10 ವರ್ಷಗಳ ನಂತರ ಬೆಳೆಯಲು ಸೂಕ್ತ. ಫಾರೆಸ್ಟಿರೋ ಹೆಚ್ಚು ಪ್ರಚಲಿತ ತಳಿ. 2.7 × 5.4 ಮೀ ಅಂತರ. 100:40:140 ಗ್ರಾಂ ಸಾ:ರಂ:ಪೊ. ಪ್ರತಿ ಹೆಕ್ಟೇರಿಗೆ ವರ್ಷಕ್ಕೆ 6 ಕ್ವಿಂಟಾಲ್ ಒಣ ಬೀಜ.

6. ಅಡಿಕೆ + ಶುಂಠಿ/ಅರಿಶಿನ

Ginger / Turmeric

ಎರಡು ಸಾಲಿನ ನಡುವೆ 1 ಮೀ ಅಗಲ × 15 ಅಡಿ ಉದ್ದದ ಏರು ಮಡಿಗಳಲ್ಲಿ 30 × 30 ಸೆಂ.ಮೀ. ಅಂತರದಲ್ಲಿ ಮಾರ್ಚ್-ಏಪ್ರಿಲ್ ಬಿತ್ತನೆ. ಪ್ರತಿ ಹೆಕ್ಟೇರಿಗೆ 7-8 ಟನ್ ತಾಜಾ ಇಳುವರಿ.

7. ಅಡಿಕೆ + ವೀಳೆದೆಲೆ

Betel Leaf

ಬೇರು ಬಿಟ್ಟ ಬಳ್ಳಿಗಳನ್ನು ಮರದ ಬುಡದಿಂದ 1.5 ಅಡಿ ದೂರದಲ್ಲಿ 1.5 ಅಡಿ ಘನ ಗಾತ್ರದ ಗುಣಿಯಲ್ಲಿ ಮುಂಗಾರಿನ ಮೊದಲು ನಾಟಿ. ಬಯಲು ಸೀಮೆಯಲ್ಲಿ ಅಗಸೆ ಮತ್ತು ಹಾಲುವಾಣ ಮರ ಆಸರೆ.

8. ಅಡಿಕೆ + ಕಾಫಿ

Coffee

ಹಳೆಯ ಅಡಿಕೆ ತೋಟಗಳಿಗೆ ಉತ್ತಮ ಮಿಶ್ರಬೆಳೆ. ಮಲೆನಾಡಿನಲ್ಲಿ ರೋಬಸ್ಟ ಜನಪ್ರಿಯ. ಎರಡು ಸಾಲುಗಳ ನಡುವೆ ಅರೇಬಿಕಾ 9 × 18 ಅಡಿ, ರೋಬಸ್ಟ 18 × 18 ಅಡಿ ಅಂತರ.

9. ಅಡಿಕೆ + ಏಲಕ್ಕಿ

Cardamom

ಮಲೆನಾಡಿನ ತಂಪಾದ ಹವಾಗುಣಕ್ಕೆ ಸೂಕ್ತ. ಮೂಡಿಗೆರೆ-1 ಪ್ರಚಲಿತ ತಳಿ. ಹೆಕ್ಟೇರಿಗೆ 1,350-1,370 ಕಂದು. ಪ್ರತಿ ಗಿಡಕ್ಕೆ 75:75:150 ಗ್ರಾಂ ಸಾ:ರಂ:ಪೊ. ಆಗಸ್ಟ್-ಜನವರಿ ಕೊಯ್ಲು; ಹೆಕ್ಟೇರಿಗೆ 250-300 ಕೆ.ಜಿ.

10. ಅಡಿಕೆ + ಜಾಯಿಕಾಯಿ / ಲವಂಗ / ದಾಲ್ಚಿನ್ನಿ

Nutmeg / Clove / Cinnamon

ಜಾಯಿಕಾಯಿ 5 × 5 ಮೀ, ಲವಂಗ 6 × 6 ಮೀ ಅಂತರ. 200:180:500 ಗ್ರಾಂ ರಸಗೊಬ್ಬರ. ಜಾಯಿಕಾಯಿ — 15 ವರ್ಷದ ನಂತರ ಪ್ರತಿ ಗಿಡಕ್ಕೆ 1000 ಕಾಯಿ. ಲವಂಗ — 5-7 ವರ್ಷದಿಂದ ಫಲ; 15-20 ವರ್ಷ ಗಿಡಗಳಿಂದ ಪ್ರತಿ ಗಿಡಕ್ಕೆ 4-5 ಕೆ.ಜಿ. ಮೊಗ್ಗು.

11. ಅಡಿಕೆ + ಸುವರ್ಣಗೆಡ್ಡೆ

Elephant Foot Yam

ಒಣ ಪ್ರದೇಶ — ಮಾರ್ಚ್-ಏಪ್ರಿಲ್; ಕರಾವಳಿ — ಮೇ ತಿಂಗಳಲ್ಲಿ ನಾಟಿ. 90 × 90 ಸೆಂ.ಮೀ ಅಂತರದಲ್ಲಿ 60 × 60 × 45 ಸೆಂ.ಮೀ ಗುಣಿ. ಪ್ರತಿ ಹೆಕ್ಟೇರಿಗೆ 80:60:100 ಕೆ.ಜಿ. ಸಾ:ರಂ:ಪೊ. 6-7 ತಿಂಗಳಲ್ಲಿ ಕಟಾವು; 40-50 ಟನ್ ಇಳುವರಿ.

Summary

ಸಾರಾಂಶ

ಮಲೆನಾಡು ಪ್ರದೇಶಕ್ಕೆ — ಅಡಿಕೆ, ಬಾಳೆ, ಕರಿಮೆಣಸು, ಕಾಫಿ, ಏಲಕ್ಕಿ, ಲವಂಗ ಹಾಗೂ ದಾಲ್ಚಿನ್ನಿ ಸೂಕ್ತ.
ಮೈದಾನ ಪ್ರದೇಶಕ್ಕೆ — ಅಡಿಕೆ, ಬಾಳೆ, ಪಪ್ಪಾಯ, ನುಗ್ಗೆ, ಕೋಕೋ, ಕರಿಮೆಣಸು, ವೀಳೆದೆಲೆ, ಶುಂಠಿ ಹಾಗೂ ಅರಿಶಿನ ಉತ್ತಮ.

ಅಡಿಕೆ ಬೆಲೆಯ ಏರಿಳಿತದಿಂದ ಬೆಳೆಗಾರರು ಸೂಕ್ತ ಅಂತರ/ಮಿಶ್ರ ಬೆಳೆ ಪದ್ಧತಿಯನ್ನು ಅಳವಡಿಸಿಕೊಂಡರೆ ನಿರಂತರ ಆದಾಯ ಪಡೆಯಬಹುದು.