ಮಾಮ್‌ಕೋಸ್
MAMCOS
ಮಾಮ್‌ಕೋಸ್ ಗೆ ಸುಸ್ವಾಗತ — 1939 ರಿಂದ ನಿರಂತರ ನಿಮ್ಮ ಸೇವೆಯಲ್ಲಿ
ಸಾವಯವ ಗೊಬ್ಬರ · Organic Fertilizer

ಮಾಮ್‌ಕೋಸ್ ಸಸ್ಯ ಚೈತನ್ಯ

MAMCOS SASYA CHAITANYA

ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತ, ಶಿವಮೊಗ್ಗ (MAMCOS) ಸಂಸ್ಥೆಯ ಅತ್ಯುತ್ತಮ ಜೈವಿಕ ಸಾಂದ್ರ ಸಾವಯವ ಗೊಬ್ಬರ.

"ಎಲ್ಲಾ ಬೆಳೆಗಳಿಗೆ ಶಕ್ತಿ ಮತ್ತು ಚೈತನ್ಯ, ಮಾಮ್‌ಕೋಸ್ ಸಸ್ಯ ಚೈತನ್ಯ"

Sasya Chaitanya Bag Organic
ಸಹಕಾರಿ ನಿಗದಿತ ದರ / PRICE
₹415 / 50kg bag
ಸಂಘದ ಎಲ್ಲಾ ಶಾಖೆಗಳಲ್ಲಿ ಲಭ್ಯ

ಉತ್ಪನ್ನದ ವೈಶಿಷ್ಟ್ಯಗಳು Product Features

  • ಇದು ಒಂದು ಉತ್ಕೃಷ್ಟವಾದ ಹಾಗೂ ಪರಿಪೂರ್ಣವಾದ ಹಲವು ಪೋಷಕಾಂಶಗಳನ್ನು ಹೊಂದಿರುವ ಸಾವಯವ ಮಿಶ್ರಿತ ಜೈವಿಕ ಗೊಬ್ಬರವಾಗಿದೆ.
  • ಎಲ್ಲಾ ಬೆಳೆಗಳ ಇಳುವರಿಯನ್ನು ಹೆಚ್ಚಿಸುವುದರ ಜೊತೆಗೆ ಮಣ್ಣಿನ ಫಲವತ್ತತೆಯನ್ನು ಸಹ ಹೆಚ್ಚಿಸುತ್ತದೆ.
  • ರಾಸಾಯನಿಕ ಗೊಬ್ಬರದ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುತ್ತದೆ.
  • ಪಿ.ಹೆಚ್. (pH) ಸರಿಪಡಿಸುತ್ತದೆ ಮತ್ತು ಮಹತ್ವದ ಲಘು ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುತ್ತದೆ.
  • ಬೇರುಗಳ ಉತ್ತಮ ಬೆಳವಣಿಗೆಯಲ್ಲಿ ಸಹಾಯಕಾರಿಯಾಗುತ್ತದೆ ಮತ್ತು ಮಣ್ಣಿನಿಂದ ಬರುವ ರೋಗಗಳನ್ನು ಸರಿಪಡಿಸುತ್ತದೆ.
  • ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಸುಧಾರಿಸಿ ಬರ ಪರಿಸ್ಥಿತಿ ಹಾಗೂ ವ್ಯತಿರಿಕ್ತ ಹವಾಮಾನವನ್ನು ತಡೆದುಕೊಳ್ಳುವಂತೆ ಮಾಡುತ್ತದೆ.

ಸೂಕ್ಷ್ಮ ಜೀವಿಗಳ ವಿವರ Micro-organisms

ಟ್ರೈಕೋಡರ್ಮಾ ವಿರಿಡೆ (Trichoderma Viride)

ಮಣ್ಣಿನಿಂದ ಬರುವ ರೋಗಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಗಿಡಗಳು ಒಣಗದಂತೆ ಕಾಪಾಡುತ್ತದೆ.

ಅಝಟೋಬ್ಯಾಕ್ಟರ್ (Azotobacter)

ಸಾರಜನಕವನ್ನು ಸ್ಥಿರೀಕರಿಸುತ್ತದೆ. ಬೀಜಗಳ ಮೊಳಕೆ ಪ್ರಮಾಣ ಮತ್ತು ಬೆಳೆಗಳ ಬೆಳವಣಿಗೆಯ ವೇಗ ಹೆಚ್ಚಿಸುತ್ತದೆ.

ರಂಜಕ ಕರಗಿಸುವ ಜೈವಿಕ ಗೊಬ್ಬರ (PSB)

ಖನಿಜ ರೂಪದಲ್ಲಿರುವ ರಂಜಕವನ್ನು ಕರಗಿಸುತ್ತದೆ. ಶಿಲಾರಂಜಕದೊಂದಿಗೆ ಬಳಸಿದಾಗ ಸೂಪರ್ ಫಾಸ್ಟೇಟ್‌ನಷ್ಟೇ ಪರಿಣಾಮಕಾರಿ.

ಪೊಟ್ಯಾಶ್ ಮೊಬಲೈಸಿಂಗ್ ಬ್ಯಾಕ್ಟಿರಿಯಾ (KMB)

ಮಣ್ಣಿನಲ್ಲಿ ಪೊಟ್ಯಾಶ್ ಲಭ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಪೋಷಕಾಂಶಗಳನ್ನು ಸರಳೀಕರಿಸುತ್ತದೆ.

Nutrients

ಪೋಷಕಾಂಶಗಳು ಮತ್ತು ಪ್ರಮಾಣ

Nutrient Content

ಸಾವಯವ ಇಂಗಾಲ

Org. Carbon

21.5%

ಒಟ್ಟು ನೈಟ್ರೋಜನ್

Nitrogen

1.8 - 2.2%

ಒಟ್ಟು ರಂಜಕ

Phosphorus

2.1 - 2.7%

ಒಟ್ಟು ಪೊಟ್ಯಾಶ್

Potash

2.4 - 2.9%

ಕ್ಯಾಲ್ಸಿಯಮ್

Calcium

1.5 - 2%

ಮ್ಯಾಗ್ನೆಸಿಯಂ

Magnesium

0.8 - 0.9%

ಸಲ್ಪರ್

Sulphur

1 - 1.4%

ಐರನ್

Iron

1000 - 1300 ppm

ಜಿಂಕ್

Zinc

162 - 250 ppm

ಮ್ಯಾಂಗನೀಜ್

Manganese

162 - 190 ppm

ಬೋರಾನ್

Boron

8 - 9 ppm

ಹುಮಿಕ್ ಆಸಿಡ್

Humic Acid

6 - 9%

Dosage

ಬೆಳೆಗಳಿಗೆ ಉಪಯೋಗಿಸುವ ಸೂಚಿತ ಪ್ರಮಾಣ

Recommended Dosage

ಅಡಿಕೆ

Areca

2 ಕೆ.ಜಿ. / ಗಿಡಕ್ಕೆ

ಕಾಳುಮೆಣಸು

Black Pepper

1 - 1.5 ಕೆ.ಜಿ. / ಬಳ್ಳಿಗೆ

ಬಾಳೆ

Banana

1.5 - 2 ಕೆ.ಜಿ. / ಗಿಡಕ್ಕೆ

ತೆಂಗು

Coconut

3 - 4 ಕೆ.ಜಿ. / ಮರಕ್ಕೆ

ವೆನಿಲ್ಲಾ

Vanilla

1 - 2 ಕೆ.ಜಿ. / ಬಳ್ಳಿಗೆ

ಶುಂಠಿ

Ginger

2 ಟನ್ / ಎಕರೆಗೆ

ಭತ್ತ

Paddy

200 - 250 ಕೆ.ಜಿ. / ಎಕರೆಗೆ

ಕಾಫಿ

Coffee

0.5 - 1 ಕೆ.ಜಿ. / ಗಿಡಕ್ಕೆ

ಏಲಕ್ಕಿ

Cardamom

2 - 3 ಕೆ.ಜಿ. / ಗಿಡಕ್ಕೆ

ಕಬ್ಬು

Sugarcane

400 - 500 ಕೆ.ಜಿ. / ಎಕರೆಗೆ

ತರಕಾರಿ / ಹೂವುಗಳು

Vegetables / Flowers

500 ಕೆ.ಜಿ. / ಎಕರೆಗೆ

Availability

MAMCOS

ಸಂಘದ ಎಲ್ಲಾ ಶಾಖೆ ಹಾಗೂ ಏಜೆನ್ಸಿಗಳಲ್ಲಿ ಲಭ್ಯ

Contact

08182-250513, 250514

94498-63253

Online

www.mamcos.info

homamcos@gmail.com