ಮಾಮ್‌ಕೋಸ್
MAMCOS
ಮಾಮ್‌ಕೋಸ್ ಗೆ ಸುಸ್ವಾಗತ — 1939 ರಿಂದ ನಿರಂತರ ನಿಮ್ಮ ಸೇವೆಯಲ್ಲಿ
ಸಾವಯವ ಗೊಬ್ಬರ · Organic Fertilizer

ವಸುಧಾ ಸಿರಿ ಸಾವಯವ ಗೊಬ್ಬರ

VASUDHA SIRI ORGANIC FERTILIZER

ಮಾಮ್‌ಕೋಸ್ ಸಂಸ್ಥೆಯ ಅತ್ಯುತ್ತಮ ಕಾಯಿರ್ ಪೀಥ್ ಆಧಾರಿತ ಸಾವಯವ ಗೊಬ್ಬರ. ಅಡಿಕೆ ಹಾಗೂ ತೆಂಗು ಬೆಳೆಗಾರರಿಗೆ ಮಣ್ಣಿನ ಫಲವತ್ತತೆ ಮತ್ತು ಇಳುವರಿ ಹೆಚ್ಚಿಸಲು ಸಮಗ್ರ ಪರಿಹಾರ.

"ಪ್ರಮುಖ ಪೋಷಕಾಂಶ ಮತ್ತು ಲಘು ಪೋಷಕಾಂಶಗಳ ಮಿಶ್ರಣವಾಗಿದೆ — 16 ಬಗೆಯ ಪೋಷಕಾಂಶಗಳ ಆಗರ"

Vasudha Siri Bag Organic
ಸಹಕಾರಿ ನಿಗದಿತ ದರ / PRICE
₹425 / 50kg bag
ಸಂಘದ ಎಲ್ಲಾ ಶಾಖೆಗಳಲ್ಲಿ ಲಭ್ಯ

ಉತ್ಪನ್ನದ ವೈಶಿಷ್ಟ್ಯಗಳು Product Features

  • ಇದು ಒಂದು ಪ್ರಮುಖ ಪೋಷಕಾಂಶ ಮತ್ತು ಲಘು ಪೋಷಕಾಂಶಗಳ ಮಿಶ್ರಣವಾಗಿದೆ.
  • 9 ಬಗೆಯ ಕಚ್ಚಾ ವಸ್ತುಗಳಿಂದ ತಯಾರಾಗಿದ್ದು 16 ಬಗೆಯ ಪೋಷಕಾಂಶಗಳ ಆಗರವಾಗಿದೆ.
  • ಒಂದು ಗಿಡ ಬೆಳೆಯಲು ಬೇಕಾದ ಎಲ್ಲಾ ಪ್ರಮುಖ ಮತ್ತು ಲಘು ಪೋಷಕಾಂಶಗಳ ಸಮತೋಲಿತ ಮಿಶ್ರಣ.
  • ಪೋಷಕಾಂಶಗಳ ಕೊರತೆಯಿಂದ ಗಿಡಗಳಲ್ಲಿ ಬರುವ ರೋಗಗಳನ್ನು ತಡೆಗಟ್ಟುತ್ತದೆ.
  • ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಬೆಳೆಗಳ ಉತ್ಪಾದನೆಯನ್ನು ವೃದ್ಧಿಗೊಳಿಸುತ್ತದೆ.
  • ಜೈವಿಕ ಗೊಬ್ಬರಗಳಾದ ಟ್ರೈಕೋಡರ್ಮಾ, ಅಝಟೋಬ್ಯಾಕ್ಟರ್, PSB, KMB ಒಳಗೊಂಡಿದೆ.

ಕಚ್ಚಾ ವಸ್ತುಗಳು Raw Materials

ತೆಂಗಿನ ನಾರಿನ ಪುಡಿ

Coconut Coir Powder

30%

ಸಗಣಿ ಗೊಬ್ಬರ

Cow Dung Manure

20%

ಕೋಳಿ ಗೊಬ್ಬರ

Poultry Manure

20%

ಎರೆಹುಳು ಗೊಬ್ಬರ

Vermicompost

10%

ಕೃಷಿಸುಣ್ಣ

Agricultural Lime

10%

ಮೈನ್ಸ್ ಮೆಗ್ನೀಶಿಯಮ್

Mined Magnesium Sulphate

10%
Microbes

ಸೂಕ್ಷ್ಮ ಜೀವಿಗಳ ವಿವರ

5 types of beneficial microbes

ಟ್ರೈಕೋಡರ್ಮಾ

Trichoderma

40 × 10⁸

ಮಣ್ಣಿನಿಂದ ಬರುವ ರೋಗಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಸಸ್ಯಗಳಿಗೆ ಸಹಾಯ ಮಾಡುವ ಸಹಜ ಶಿಲೀಂಧ್ರ. ರಂಜಕ ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಸರಳೀಕರಿಸಿ ಬೆಳೆಗೆ ಸುಲಭವಾಗಿ ದೊರಕಿಸುತ್ತದೆ.

ಅಝಟೋಬ್ಯಾಕ್ಟರ್

Azotobacter

37 × 10⁶

ಸಾರಜನಕವನ್ನು ಸ್ಥಿರೀಕರಿಸುತ್ತದೆ. ಕಬ್ಬು, ಜೋಳ ಸಸ್ಯಗಳಿಗೆ ಮತ್ತು ಸಸ್ಯ ಬೆಳವಣಿಗೆಗೆ ಪ್ರಚೋದನಕಾರಿ ಪದಾರ್ಥಗಳನ್ನು ಹೆಚ್ಚಿಸಿ ಬೆಳೆಗಳ ಬೆಳವಣಿಗೆಯ ವೇಗ ಹೆಚ್ಚಿಸುತ್ತದೆ.

ರಂಜಕ ಕರಗಿಸುವ ಜೈವಿಕ ಗೊಬ್ಬರ

PSB

49 × 10⁷

ಮಣ್ಣಿನಲ್ಲಿ ಲಭ್ಯವಿರುವ ಖನಿಜ ರೂಪದಲ್ಲಿರುವ ರಂಜಕವನ್ನು ಕರಗಿಸಿ ಬೆಳೆಗೆ ಒದಗಿಸುತ್ತದೆ. ಶಿಲಾ ರಂಜಕದೊಂದಿಗೆ ಬಳಸಿದಾಗ ಸೂಪರ್ ಫಾಸ್ಫೇಟ್‌ನಷ್ಟೇ ಪರಿಣಾಮಕಾರಿ.

ಪೊಟ್ಯಾಶ್ ಮೊಬಲೈಸಿಂಗ್ ಬ್ಯಾಕ್ಟೀರಿಯಾ

KMB

36 × 10⁸

ಮಣ್ಣಿನ ಪೊಟ್ಯಾಶ್ ಲಭ್ಯತೆಯನ್ನು ಹೆಚ್ಚಿಸುತ್ತದೆ. ಸ್ಥಿರಸ್ವರೂಪದ ಪೊಟ್ಯಾಶ್ ಅನ್ನು ಸರಳೀಕರಿಸಿ ಬೆಳೆಗೆ ದೊರಕುವಂತೆ ಮಾಡುತ್ತದೆ.

ಸ್ಯೂಡೋಮೋನಾಸ್

Pseudomonas

ಸಸ್ಯಗಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಬೇರು ಪ್ರದೇಶದ ಆರೋಗ್ಯವನ್ನು ಕಾಪಾಡುತ್ತದೆ.

Nutrients

ಪೋಷಕಾಂಶಗಳು ಮತ್ತು ಪ್ರಮಾಣ

Nutrient Content

ಸಾವಯವ ಇಂಗಾಲ

Org. Carbon

22.5%

ಒಟ್ಟು ನೈಟ್ರೋಜನ್

Nitrogen

2.2 - 2.8%

ಒಟ್ಟು ರಂಜಕ

Phosphorus

2.3 - 3.0%

ಒಟ್ಟು ಪೊಟ್ಯಾಶ್

Potash

2.4 - 2.9%

ಕ್ಯಾಲ್ಸಿಯಮ್

Calcium

1.7 - 2.2%

ಮ್ಯಾಗ್ನೆಸಿಯಂ

Magnesium

0.8 - 1%

ಸಲ್ಪರ್

Sulphur

1.2 - 1.6%

ಐರನ್

Iron

1100 - 1400 ppm

ಜಿಂಕ್

Zinc

165 - 260 ppm

ಮ್ಯಾಂಗನೀಜ್

Manganese

162 - 200 ppm

ಬೋರಾನ್

Boron

9 - 10 ppm

ಹುಮಿಕ್ ಆಸಿಡ್

Humic Acid

7 - 10%

Dosage

ಬೆಳೆಗಳಿಗೆ ಉಪಯೋಗಿಸುವ ಸೂಚಿತ ಪ್ರಮಾಣ

Recommended Dosage

ಅಡಿಕೆ

Areca

ಗಿಡ: 2 ಕೆ.ಜಿ. · ಮರ: 4 ಕೆ.ಜಿ.

ಕಾಳುಮೆಣಸು

Black Pepper

2 - 3 ಕೆ.ಜಿ. / ಬಳ್ಳಿಗೆ

ಬಾಳೆ

Banana

4 ಕೆ.ಜಿ. / ಗಿಡಕ್ಕೆ

ತೆಂಗು

Coconut

ಗಿಡ: 5 ಕೆ.ಜಿ. · ಮರ: 10 ಕೆ.ಜಿ.

ಶುಂಠಿ

Ginger

1 ಬಾರ್ಡರಿಕೆ

ಕಾಫಿ

Coffee

1 ಕೆ.ಜಿ. / ಗಿಡಕ್ಕೆ

ಇದನ್ನು ಏಕೆ ಬಳಸಬೇಕು? Why use it?

ಒಂದು ಗಿಡ ಬೆಳೆಯಲು ಬೇಕಾದ ಎಲ್ಲಾ ಪ್ರಮುಖ ಪೋಷಕಾಂಶಗಳ ಜೊತೆ 16 ಬಗೆಯ ಲಘು ಪೋಷಕಾಂಶಗಳ ಆಗರವಾಗಿದೆ. ಪೋಷಕಾಂಶಗಳ ಕೊರತೆಯಿಂದ ಬರುವ ರೋಗಗಳನ್ನು ತಡೆಗಟ್ಟುತ್ತದೆ ಮತ್ತು ಬೆಳೆಯ ಇಳುವರಿಯನ್ನು ಹೆಚ್ಚಿಸುತ್ತದೆ.

ಇದನ್ನು ಹೇಗೆ ಬಳಸಬೇಕು? How to use?

4 ರಿಂದ 5 ವರ್ಷ ಮೇಲ್ಪಟ್ಟ ಅಡಿಕೆ ಗಿಡಗಳಿಗೆ ವರ್ಷಕ್ಕೆ 2 ಬಾರಿ ಕೊಡುವುದು ಸೂಕ್ತ. ಒಂದು ಗಿಡಕ್ಕೆ 4 ಕೆ.ಜಿ. ಪ್ರಮಾಣದಂತೆ ಬಳಸಿ. ಸಣ್ಣ ಗಿಡಗಳಿಗೆ (1 - 3 ವರ್ಷ) ಪ್ರತಿ ಬಾರಿ 1 ಕೆ.ಜಿ. ಯಂತೆ ಕೊಡಬೇಕು.

ಯಾವಾಗ ಬಳಸಬೇಕು? When to use?

ಮೊದಲ ಬಾರಿ — ಅಕ್ಟೋಬರ್–ನವೆಂಬರ್ ತಿಂಗಳಲ್ಲಿ. ಎರಡನೇ ಬಾರಿ — ಮೇ–ಜೂನ್ ತಿಂಗಳಲ್ಲಿ. ಸಣ್ಣ ಗಿಡಗಳಿಗೆ (1 - 3 ವರ್ಷ) ಗೊಬ್ಬರವನ್ನು ಅಕ್ಟೋಬರ್–ಜನವರಿ ತಿಂಗಳಲ್ಲಿ ಕೊಡಬೇಕು.

Availability

MAMCOS

ಸಂಘದ ಎಲ್ಲಾ ಶಾಖೆ ಹಾಗೂ ಏಜೆನ್ಸಿಗಳಲ್ಲಿ ಲಭ್ಯ

Contact

08182-250513, 250514

94498-63253

Online

www.mamcos.info

homamcos@gmail.com