ಮಾಮ್‌ಕೋಸ್
MAMCOS
ಮಾಮ್‌ಕೋಸ್ ಗೆ ಸುಸ್ವಾಗತ — 1939 ರಿಂದ ನಿರಂತರ ನಿಮ್ಮ ಸೇವೆಯಲ್ಲಿ

ಅಂತ್ಯ ಸಂಸ್ಕಾರ ನಿಧಿ ಯೋಜನೆ

ಅಂತ್ಯ ಸಂಸ್ಕಾರ ನಿಧಿ ಯೋಜನೆ

ಸದಸ್ಯರು ಮೃತಪಟ್ಟ ಸಾಲಿನ ಹಿಂದಿನ ಸತತ ಮೂರು ವರ್ಷಗಳಲ್ಲಿ ಅಥವಾ ವರದಿ ಸಾಲೂ ಸೇರಿದಂತೆ ಸತತ ಮೂರು ವರ್ಷಗಳಲ್ಲಿ ಕನಿಷ್ಟ ಒಂದು ವರ್ಷವಾದರೂ ಕಡ್ಡಾಯವಾಗಿ ಸಂಘದ ಉಪವಿಧಿಯಲ್ಲಿ ನಮೂದಿಸಿದ ಕನಿಷ್ಟ ವ್ಯವಹಾರವನ್ನು ಮಾಡಿದ ಸದಸ್ಯರು ಮೃತರಾದಲ್ಲಿ ಅವರ ಅಂತ್ಯ ಸಂಸ್ಕಾರಕ್ಕೆ ಅವರ ನಾಮಿನಿ/ವಾರಸುದಾರರಿಗೆ ಸಂಘದಿಂದ ₹5,000-00 ಆರ್ಥಿಕ ನೆರವನ್ನು ನೀಡಲಾಗುತ್ತದೆ.

ಷರತ್ತುಗಳು

  1. ಈ ಯೋಜನೆಯ ಪ್ರಯೋಜನವು ದೊರಕಲು ಮೃತ ಸದಸ್ಯರು ಸಂಘದ ಉಪವಿಧಿಯನ್ವಯ ಸದಸ್ಯತ್ವವನ್ನು ಹೊಂದಿ ಕನಿಷ್ಠ ಒಂದು ವರ್ಷವಾಗಿರತಕ್ಕದ್ದು.
  2. ಸದಸ್ಯರು ಮೃತಪಟ್ಟ ಸಾಲಿನ ಹಿಂದಿನ ಸತತ ಮೂರು ವರ್ಷಗಳಲ್ಲಿ ಅಥವಾ ಈ ಸಾಲು ಸೇರಿದಂತೆ ಸತತ ಮೂರು ವರ್ಷಗಳಲ್ಲಿ ಕನಿಷ್ಠ ಒಂದು ವರ್ಷವಾದರೂ ಕಡ್ಡಾಯವಾಗಿ ಸಂಘದ ಉಪವಿಧಿಯಲ್ಲಿ ನಮೂದಿಸಿದ ಕನಿಷ್ಠ ವ್ಯವಹಾರವನ್ನು ಮಾಡಿದ್ದಲ್ಲಿ ಮಾತ್ರಾ ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಅವಕಾಶವಿರುತ್ತದೆ. ಇಲ್ಲದಿದ್ದಲ್ಲಿ ಈ ಸೌಲಭ್ಯಕ್ಕೆ ಅನರ್ಹರಾಗುತ್ತಾರೆ.
  3. ಮೃತ ಸದಸ್ಯರ ವಾರಸುದಾರರಿಗೆ ಈ ಹಣವನ್ನು ಪಾವತಿಸಲಾಗುವುದು.
  4. ಈ ಯೋಜನೆಯ ಸೌಲಭ್ಯವನ್ನು ಪಡೆಯುವ ವಾರಸುದಾರರು ಸದಸ್ಯರು ಮೃತಪಟ್ಟ ದಿನಾಂಕದಿಂದ ಆರು ತಿಂಗಳೊಳಗೆ ಸಂಘಕ್ಕೆ ಲಿಖಿತವಾಗಿ ತಿಳಿಸತಕ್ಕದ್ದು.
  5. ನಿಯಮಗಳನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡುವ ಅಧಿಕಾರ ಸಂಘದ ಆಡಳಿತ ಮಂಡಲಿಗೆ ಇರುತ್ತದೆ.

ಹೆಚ್ಚಿನ ವಿವರಗಳಿಗೆ ಕೇಂದ್ರ ಕಛೇರಿ, ಹತ್ತಿರದ ಶಾಖೆ ಅಥವಾ ಏಜೆನ್ಸಿಯನ್ನು ಸಂಪರ್ಕಿಸಿ.