ಮಾಮ್‌ಕೋಸ್
MAMCOS
ಮಾಮ್‌ಕೋಸ್ ಗೆ ಸುಸ್ವಾಗತ — 1939 ರಿಂದ ನಿರಂತರ ನಿಮ್ಮ ಸೇವೆಯಲ್ಲಿ
ಸಸ್ಯ ಸಂರಕ್ಷಣೆ · Plant Protection

ಬೋರ್ಡೋ ದ್ರಾವಣದ ತಯಾರಿಕೆ

Scientific Preparation of Bordeaux Mixture

ಅಡಿಕೆಗೆ ಬರುವ ಕೊಳೆರೋಗ / ಸುಳಿಕೊಳೆ ರೋಗ ಹಾಗೂ ಎಲೆಚುಕ್ಕೆ ರೋಗದ ನಿಯಂತ್ರಣಕ್ಕೆ ಬಳಸುವ ಪ್ರಮುಖ ಶಿಲೀಂಧ್ರನಾಶಕ.

ಸೂಚನೆ

ಬೋರ್ಡೋ ದ್ರಾವಣದ ರಸಸಾರ ಮೈಲುತುತ್ತ ಹಾಗೂ ಸುಣ್ಣದ ಗುಣಧರ್ಮದ ಮೇಲೆ ನಿರ್ಣಯವಾಗುತ್ತದೆ.

Materials Needed

ಮೂಲ ವಸ್ತುಗಳ ಪ್ರಮಾಣ

ವಿವಿಧ ಸಾಂಧ್ರತೆಯ ದ್ರಾವಣ ಮತ್ತು ಲೇಪನಕ್ಕೆ

ಪ್ರಮಾಣ / ಸಾಂಧ್ರತೆ ನೀರು (ಲೀ) ಮೈಲುತುತ್ತ (ಗ್ರಾಂ) ಸುಣ್ಣದ ಹರಳು (ಗ್ರಾಂ) ಪೌಡರ್ ಸುಣ್ಣ (Ca(OH)₂)
1% ದ್ರಾವಣ 1000 750 350 100
10% ಮುಲಾಮು 1000 750 350 10

ಶೇ. 1ರ ಬೋರ್ಡೋ ದ್ರಾವಣ (100 ಲೀ.)

1% Bordeaux Solution Preparation

ಬೇಕಾಗುವ ಸಾಮಗ್ರಿಗಳು

  • • ಮೈಲುತುತ್ತ ಹರಳು (1 ಕೆ.ಜಿ.)
  • • ಪೌಡರ್ ಸುಣ್ಣ (350 ಗ್ರಾಂ) ಅಥವಾ ಸುಣ್ಣದ ಹರಳು (750 ಗ್ರಾಂ)
  • • 10 ಲೀ. ಸಾಮರ್ಥ್ಯದ 2 ಪ್ಲಾಸ್ಟಿಕ್ ಬಕೆಟ್
  • • 100 ಲೀ. ಸಾಮರ್ಥ್ಯದ ಡ್ರಮ್ / ಬ್ಯಾರೆಲ್
  • • ಮಿಶ್ರಣ ಮಾಡಲು ಮರದ ಕೋಲು
  • • ಲಿಟ್‌ಮಸ್ ಕಾಗದ (pH ಪೇಪರ್) / ಚಾಕು / ಬ್ಲೇಡ್
  • • 100 ಲೀ. ನೀರು

ತಯಾರಿಸುವ ವಿಧಾನ

  1. 1

    ಮೈಲುತುತ್ತ ಕರಗಿಸಿ

    10 ಲೀ. ನೀರಿರುವ ಪ್ಲಾಸ್ಟಿಕ್ ಬಕೆಟ್‌ನಲ್ಲಿ 1 ಕೆ.ಜಿ. ಮೈಲುತುತ್ತ (ತಾಮ್ರದ ಸಲ್ಫೇಟ್) ಸಂಪೂರ್ಣವಾಗಿ ಕರಗಿಸಬೇಕು.

  2. 2

    ಸುಣ್ಣ ಕರಗಿಸಿ

    ಇನ್ನೊಂದು 10 ಲೀ. ನೀರಿರುವ ಬಕೆಟ್‌ನಲ್ಲಿ 750 ಗ್ರಾಂ ಸುಣ್ಣದ ಹರಳು / ಸುಟ್ಟ ಸುಣ್ಣ ಅಥವಾ 350 ಗ್ರಾಂ ಪೌಡರ್ ಸುಣ್ಣ (ಕ್ಯಾಲ್ಸಿಯಂ ಹೈಡ್ರಾಕ್ಸೈಡ್) ಸಂಪೂರ್ಣವಾಗಿ ಕರಗಿಸಬೇಕು.

  3. 3

    ಎರಡೂ ದ್ರಾವಣ ಬೆರೆಸಿ

    80 ಲೀ. ನೀರಿರುವ ಡ್ರಮ್‌ಗೆ ಎರಡೂ ದ್ರಾವಣಗಳನ್ನು ಸಮ ಪ್ರಮಾಣದಲ್ಲಿ ನಿಧಾನವಾಗಿ ಮಿಶ್ರಣ ಮಾಡುತ್ತಾ ಸುರಿಯಬೇಕು. 5-10 ನಿಮಿಷಗಳ ಕಾಲ ಸಮ ಪ್ರಮಾಣದಲ್ಲಿ ಕಲಸಿ.

  4. 4

    pH ಪರೀಕ್ಷೆ

    ಬೋರ್ಡೋ ದ್ರಾವಣದ ರಸಸಾರವು ತಟಸ್ಥದಿಂದ ಪ್ರತ್ಯಾಮ್ಲ ಮಟ್ಟದ (pH 7.00) ಇರುವಿಕೆಯನ್ನು pH ಹಾಳೆಯಿಂದ ಪರೀಕ್ಷಿಸಬೇಕು.

ಶೇ. 10ರ ಬೋರ್ಡೋ ಲೇಪನ

10% Bordeaux Paste Preparation

  1. 1

    ಮೈಲುತುತ್ತ ಕರಗಿಸಿ

    1 ಲೀ. ನೀರಿರುವ ಪ್ಲಾಸ್ಟಿಕ್ ಬಕೆಟ್‌ನಲ್ಲಿ 100 ಗ್ರಾಂ ಮೈಲುತುತ್ತ (ತಾಮ್ರದ ಸಲ್ಫೇಟ್) ಸಂಪೂರ್ಣವಾಗಿ ಕರಗಿಸಬೇಕು.

  2. 2

    ಸುಣ್ಣ ಕರಗಿಸಿ

    ಇನ್ನೊಂದು ಬಕೆಟ್‌ನಲ್ಲಿ 1 ಲೀ. ನೀರಿಗೆ 75 ಗ್ರಾಂ ಸುಣ್ಣದ ಹರಳು/ಸುಟ್ಟ ಸುಣ್ಣ ಅಥವಾ 35 ಗ್ರಾಂ ಪೌಡರ್ ಸುಣ್ಣ ಸಂಪೂರ್ಣವಾಗಿ ಕರಗಿಸಬೇಕು.

  3. 3

    ಎರಡೂ ಸೇರಿಸಿ

    ಎರಡು ದ್ರಾವಣಗಳನ್ನು ನಿಧಾನವಾಗಿ ಸಮ ಪ್ರಮಾಣದಲ್ಲಿ ಮಿಶ್ರಣ ಮಾಡುತ್ತಾ ಸುರಿಯಬೇಕು.

  4. 4

    pH ಪರೀಕ್ಷೆ

    ರಸಸಾರವು ತಟಸ್ಥದಿಂದ ಪ್ರತ್ಯಾಮ್ಲ ಮಟ್ಟ (pH 7.00) ಇರುವುದನ್ನು pH ಹಾಳೆಯಿಂದ ಪರೀಕ್ಷಿಸಬೇಕು.