ಮಾಮ್‌ಕೋಸ್
MAMCOS
ಮಾಮ್‌ಕೋಸ್ ಗೆ ಸುಸ್ವಾಗತ — 1939 ರಿಂದ ನಿರಂತರ ನಿಮ್ಮ ಸೇವೆಯಲ್ಲಿ
ಸಾವಯವ ಗೊಬ್ಬರ · Organic Compost

ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್ ಗೊಬ್ಬರ ತಯಾರಿಕೆ

Compost from Areca Husk

ಕಾಂಪೋಸ್ಟ್ ತಯಾರಿಕೆಗಾಗಿ ಒಣಗಿದ ಅಡಿಕೆ ಸಿಪ್ಪೆಯನ್ನು ಮಾತ್ರ ಉಪಯೋಗಿಸಬೇಕು. ಆದ್ದರಿಂದ ಹಸಿ ಅಡಿಕೆಯನ್ನು ಸುಲಿಸಿ ಬರುವ ಸಿಪ್ಪೆಯನ್ನು 2-3 ತಿಂಗಳವರೆಗೆ ಬಯಲಲ್ಲಿ ಒಣಗಿಸಬೇಕು. ಚಾಲಿ ಅಡಿಕೆ ಸಿಪ್ಪೆಯನ್ನು ನೇರವಾಗಿ ಉಪಯೋಗಿಸಬಹುದು.

ಗುಂಡಿ ಗಾತ್ರ

20 × 5 × 5 ಅಡಿ

ಒಟ್ಟು ಸಮಯ

6 ತಿಂಗಳು

ಎರೆಹುಳು

5 ಕೆ.ಜಿ. / ಗುಂಡಿ

Step-by-step

ತಯಾರಿಸುವ ಪ್ರಕ್ರಿಯೆ

1

ಗುಂಡಿಯ ತಳಭಾಗ ಸಿದ್ಧಪಡಿಸಿ

20 × 5 × 5 ಅಡಿ ಗಾತ್ರದ ಗುಂಡಿಯ ತಳದಲ್ಲಿ ತೆಳುವಾಗಿ ಒಣ ಎಲೆ ಮತ್ತು ಸ್ವಲ್ಪ ಪ್ರಮಾಣದ ಕೆಂಪು ಮಣ್ಣು ಹರಡಿ.

2

1/3 ಭಾಗ ಸಿಪ್ಪೆ ತುಂಬಿ

ಮೇಲೆ 1/3 ಭಾಗ ಒಣಗಿದ ಅಡಿಕೆ ಸಿಪ್ಪೆಯನ್ನು ತುಂಬಿ. ನಂತರ 1 ಕೆ.ಜಿ. Pleurotous sajar caju ಅಥವಾ Phanerochaete chrysosporium ಸೂಕ್ಷ್ಮ ಜೀವಿಗಳ ಮಿಶ್ರಣ + 1 ಕೆ.ಜಿ. ಯೂರಿಯಾ ಹಾಕಿ ಸಗಣಿ ಬಗ್ಗಡ ಸಿಂಪಡಿಸಿ.

3

ಉಳಿದ 2 ಪದರಗಳು

ಪುನಃ ಎರಡು ಬಾರಿ 1/3 ಭಾಗ ಸಿಪ್ಪೆ ತುಂಬಿ ಪ್ರತಿ ಪದರಕ್ಕೂ ಯೂರಿಯಾ + ಸೂಕ್ಷ್ಮ ಜೀವಿಗಳ ಮಿಶ್ರಣ + ಸಗಣಿ ಬಗ್ಗಡ ಹಾಕಿ.

4

ಮುಚ್ಚಳ ಮತ್ತು ನೆರಳು

ಮೇಲ್ಭಾಗವನ್ನು ತೆಂಗಿನ ಸೋಗಿಯಿಂದ ಮುಚ್ಚಿ. ಸಾಧ್ಯವಾದರೆ ಚಪ್ಪರ ಮಾಡಿ ಸೂರ್ಯನ ಬಿಸಿಲು ಭಾಗಶಃ ಬೀಳುವಂತೆ ಮಾಡಿ.

5

ತೇವಾಂಶ ಮತ್ತು ತಿರುವು

2-3 ದಿನಗಳಿಗೊಮ್ಮೆ ನೀರು ಹಾಕಿ ತೇವಾಂಶ ಕಾಪಾಡಿಕೊಳ್ಳಿ. ತಿಂಗಳಿಗೊಮ್ಮೆ — 3 ತಿಂಗಳವರೆಗೆ — ಗುದ್ದಲಿ ಸಹಾಯದಿಂದ ಸಿಪ್ಪೆಯನ್ನು ತಿರುವಿ ಹಾಕಬೇಕು.

6

ಎರೆಹುಳು ಸೇರ್ಪಡೆ

3 ತಿಂಗಳ ನಂತರ ಪ್ರತಿ ಗುಂಡಿಗೆ 5 ಕೆ.ಜಿ. ಎರೆಹುಳುಗಳನ್ನು ಬಿಡಬೇಕು. ಪ್ರತಿ ವಾರ ತೆಳುವಾಗಿ ಸಗಣಿ ಬಗ್ಗಡ ಹಾಕಿ ತೇವಾಂಶ ಕಾಪಾಡಿ. ಎರೆಹುಳು ಹಾಕಿದ ನಂತರ ಮಿಶ್ರಣ ಮಾಡಬಾರದು.

7

ಒಟ್ಟು 6 ತಿಂಗಳಲ್ಲಿ ಸಿದ್ಧ

ಮಳೆಗಾಲದಲ್ಲಿ ನೀರು ನಿಂತರೆ ಕೆಳಭಾಗದಲ್ಲಿ ಪೈಪ್ ಹಾಕಿ ಹೆಚ್ಚಾದ ನೀರನ್ನು ತೆಗೆಯಬೇಕು. ಮೇಲ್ಕಂಡ ಎಲ್ಲಾ ಪ್ರಕ್ರಿಯೆಗಳನ್ನು ಸರಿಯಾಗಿ ಮಾಡಿದ 6 ತಿಂಗಳಲ್ಲಿ ಉತ್ಕೃಷ್ಟ ಗೊಬ್ಬರ ತಯಾರಾಗುತ್ತದೆ.

ಉಪಕರಣ · Tool

ಕಾರ್ಬನ್ ಫೈಬರ್ ದೋಟಿ

ಕರ್ನಾಟಕದ ಮಲೆನಾಡು, ಅರೆಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಕೊಯ್ಲು ಮತ್ತು ಔಷಧಿ ಸಿಂಪರಣೆಗೆ ಉಪಯೋಗಿಸಬಹುದು.

ಸಾಂಪ್ರದಾಯಿಕವಾಗಿ ಮರಹತ್ತುವ ಮೂಲಕ ಮಾಡುವ ಕೊಯ್ಲು/ಸಿಂಪರಣೆಯಿಂದ ಉಂಟಾಗುವ ಜೀವಹಾನಿಯನ್ನು ತಡೆಗಟ್ಟಬಹುದು. ಔಷಧಿಯ ಸಮರ್ಪಕ ಸಿಂಪರಣೆ — ಕಡಿಮೆ ತೂಕದಿಂದ ಸುಲಭ ಮತ್ತು ವೇಗದ ಕೊಯ್ಲು.

Height

60 - 80 ಅಡಿ

Weight

4.5 - 6.5 ಕೆ.ಜಿ.

Contact

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಅಡಿಕೆ ಸಂಶೋಧನಾ ಕೇಂದ್ರಗಳು

ಡಾ. ನಾಗರಾಜಪ್ಪ ಅಡಿವಪ್ಪರ್

ಮುಖ್ಯಸ್ಥರು

ಅಡಿಕೆ ಸಂಶೋಧನಾ ಕೇಂದ್ರ, ಶಿವಮೊಗ್ಗ

94808-38989

ಡಾ. ರವಿರಾಜ್ ಶೆಟ್ಟಿ

ಮುಖ್ಯಸ್ಥರು

ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ತೀರ್ಥಹಳ್ಳಿ

94808-38992

ಡಾ. ಸಂಜೀವ ಜಕಾತಿಮಠ

ಮುಖ್ಯಸ್ಥರು

ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಶೃಂಗೇರಿ

94808-38972