ಮಾಮ್‌ಕೋಸ್
MAMCOS
ಮಾಮ್‌ಕೋಸ್ ಗೆ ಸುಸ್ವಾಗತ — 1939 ರಿಂದ ನಿರಂತರ ನಿಮ್ಮ ಸೇವೆಯಲ್ಲಿ

ವಿವಿಧ ಸಾಲ ಸೌಲಭ್ಯಗಳು

ಸದಸ್ಯರಿಗಾಗಿ ಸಂಘದಿಂದ ನೀಡಲಾಗುವ ಸಾಲ ಯೋಜನೆಗಳ ಮಾಹಿತಿ

ವಿವಿಧ ಸಾಲ ಸೌಲಭ್ಯಗಳು

ಸಂಘದ ಸದಸ್ಯರ ಬಹುದಿನಗಳ ಬೇಡಿಕೆ ಮೇರೆಗೆ ಬೆಳೆ ಸಾಲ ಮತ್ತು ಕೊಳೆ ಔಷಧಿ ಸಾಲದ ಪ್ರಮಾಣವನ್ನು ಹೆಚ್ಚಿಗೆ ಮಾಡಲಾಗಿದೆ

ಅಡಿಕೆ ಆಧಾರ ಸಾಲ

ರೈತರ ಮಾಲಿನ ಮೇಲೆ ಶೇ. 60 ರಷ್ಟು ಮುಂಗಡ ಪಾವತಿ.

ಬಡ್ಡಿ ದರ: ಶೇ. 11.50

ಕಟಾವು ಸಾಲ

ಪ್ರತಿ ಗುಂಟೆಗೆ ರೂ.2000-00 ರಂತೆ ಅಡಿಕೆ ವಹಿವಾಟು ಆಧರಿಸಿ, ಗರಿಷ್ಠ ರೂ.1.50 ಲಕ್ಷ.

ಒಂದು ವೇಳೆ ಕೊಳೆ ಔಷಧಿ ಸಾಲವನ್ನು ಪಡೆಯಲು ಇಚ್ಛಿಸದಿದ್ದಲ್ಲಿ ಗರಿಷ್ಠ ರೂ.2.00 ಲಕ್ಷ.

ಬಡ್ಡಿ ದರ: ಶೇ. 11.50

ಕೊಳೆ ಔಷಧಿ ಸಾಲ

ಪ್ರತಿ ಗುಂಟೆಗೆ ರೂ.300-00 ರಂತೆ ಅಡಿಕೆ ವಹಿವಾಟು ಆಧರಿಸಿ, ಗರಿಷ್ಠ ರೂ.50,000-00.

ಒಂದು ವೇಳೆ ಕೊಳೆ ಔಷಧಿ ಸಾಲವನ್ನು ಮಾತ್ರ ಪಡೆಯಲು ಇಚ್ಛಿಸಿದಲ್ಲಿ ಅಂತಹವರಿಗೆ ಪ್ರತಿ ಗುಂಟೆಗೆ ರೂ.500-00 ರಂತೆ ಗರಿಷ್ಠ ರೂ.80,000-00.

ಬಡ್ಡಿ ದರ: ಶೇ. 11.50

ವಿಶೇಷ ಸೂಚನೆ

ಚಾಲ್ತಿ ಸಾಲಿನ ಕಟಾವು ಮತ್ತು ಕೊಳೆ ಔಷಧಿ ಸಾಲವನ್ನು ಸುಸ್ತಿ ಆಗದಂತೆ ಚಾಲ್ತಿ ಸಾಲಿನಲ್ಲಿ ಜಮಾ ಮಾಡಿದಲ್ಲಿ ಬಡ್ಡಿ ದರ ಶೇ. 10.50.

ನಿಗದಿತ ಠೇವಣಿ ಆಧಾರ ಸಾಲ: ಠೇವಣಿ ಹಣದ ಮೇಲೆ ಗರಿಷ್ಠ ಶೇ. 80.00 ರಷ್ಟು.

ಹೆಚ್ಚಿನ ವಿವರಗಳಿಗೆ ಕೇಂದ್ರ ಕಛೇರಿ, ಹತ್ತಿರದ ಶಾಖೆ ಅಥವಾ ಏಜೆನ್ಸಿಯನ್ನು ಸಂಪರ್ಕಿಸಿ.