1939 ರಿಂದ ನಿರಂತರ ನಿಮ್ಮ ಸೇವೆಯಲ್ಲಿ
ಸಹಕಾರ ಸಂಘದ ಶ್ರೇಷ್ಠತೆಯ ಪ್ರತೀಕ
ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತ
Malnad Areca Marketing Co-operative Society Limited
call 08182-250513 250514 email ho@mamcos.info
location_on ಎ.ಪಿ.ಎಂ.ಸಿ ಯಾರ್ಡ್, ಸಾಗರ ರಸ್ತೆ, ಶಿವಮೊಗ್ಗ - 577204
Root Grub in Areca
Leucopholis coneophora · Leucopholis burmeisteri · Leucopholis lepidophora
ಬೇರು ಹುಳುಗಳು ಅಡಿಕೆ ಕೃಷಿ ಪರಿಸರದಲ್ಲಿನ ದೀರ್ಘಕಾಲಿಕ ಕೀಟಗಳಾಗಿದ್ದು, ತೇವಾಂಶವಿರುವ ಗೋಡು ಮಣ್ಣಿನಿಂದ ಕೂಡಿದ ಹಳ್ಳದ ಪಕ್ಕದ ಮತ್ತು ಗದ್ದೆ ಜಮೀನಿನಲ್ಲಿ ಮಾಡಿದ ಅಡಿಕೆ ತೋಟಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಹುಳುಗಳು ಭೂಮಿಯೊಳಗಿದ್ದು ಬೇರುಗಳನ್ನು ಕತ್ತರಿಸಿ ತಿನ್ನುವುದರಿಂದ ಎಲೆಗಳು ಹಳದಿಯಾಗಿ, ಗರಿ ಮತ್ತು ಗೆಣ್ಣುಗಳು ಗಿಡ್ಡವಾಗಿ, ಕಾಂಡದ ತುದಿ ಮೊನಚಾಗುತ್ತದೆ. ಇಳುವರಿ ಕಡಿಮೆಯಾಗಿ ನಂತರದ ದಿನಗಳಲ್ಲಿ ಮರಗಳು ಸಾಯುತ್ತವೆ.
L. coneophora
ಲ್ಯೂಕೋಫೋಲಿಸ್ ಕೋನಿಯೋಫೋರಾ
ಹೊರಬರುವ ಸಮಯ: ಮೇ – ಜೂನ್
ಎರಡು ಮಳೆಗಳಾದ ನಂತರ
ಜೀವನ ಚಕ್ರ: 1 ವರ್ಷ
L. burmeisteri
ಲ್ಯೂಕೋಫೋಲಿಸ್ ಬರ್ಮಿಸ್ಟೆರಿ
ಹೊರಬರುವ ಸಮಯ: ಜೂನ್
ಜೂನ್ ತಿಂಗಳಲ್ಲಿ ಹೊರಬರುತ್ತವೆ
ಜೀವನ ಚಕ್ರ: 2 ವರ್ಷ
L. lepidophora
ಲ್ಯೂಕೋಫೋಲಿಸ್ ಲೆಪಿಡೋಫೋರಾ
ಹೊರಬರುವ ಸಮಯ: ಜುಲೈ ಕೊನೆ – ಆಗಸ್ಟ್
ಆಗಸ್ಟ್ ಆರಂಭದಲ್ಲಿ
ಜೀವನ ಚಕ್ರ: 2 ವರ್ಷ
ದುಂಬಿಗಳು
ಸಂಜೆಯ 6:30 - 7:30 ರ ಸುಮಾರು ಮಣ್ಣಿನಿಂದ ಹೊರಬರುತ್ತವೆ. ಮಣ್ಣಿನಿಂದ ಹೊರಗೆ ಬರಲು ಮಳೆ ಅತ್ಯಾವಶ್ಯಕ — 60-70 ಸೆಂ.ಮೀ. ಆಳದ ಮಣ್ಣಿನ ಗೂಡಿನೊಳಗೆ ಕೋಶಗಳನ್ನು ಇಡುತ್ತವೆ.
ಮೊಟ್ಟೆ
ಮೇ-ಜೂನ್‌ನಲ್ಲಿ 5-10 ಸೆಂ.ಮೀ. ಆಳದಲ್ಲಿ ಬಿಡಿಯಾಗಿ 20 ಮೊಟ್ಟೆಗಳನ್ನಿಡುತ್ತವೆ. 4-5 ಮಿ.ಮೀ. ಗಾತ್ರ; 12-15 ದಿನಗಳಲ್ಲಿ ಒಡೆಯುತ್ತವೆ.
ಮರಿಹುಳು
ಕಂದು ಬಣ್ಣದ ತಲೆ, ಬಿಳಿ ದೇಹ. ಮೊದಲ ಹಂತದಲ್ಲಿ ಸಾವಯವ ಗೊಬ್ಬರ; 2ನೇ ಹಂತದಿಂದ ಎಳೆಯ ಬೇರುಗಳನ್ನು, ನಂತರ ದೊಡ್ಡ ಬೇರುಗಳನ್ನು ಮತ್ತು ಕಾಂಡದ ಬುಡವನ್ನು ತಿನ್ನುತ್ತವೆ.
ಕೋಶಾವಸ್ಥೆ
25-30 ದಿನಗಳ ಅವಧಿ. 60-70 ಸೆಂ.ಮೀ. ಆಳದ ಮಣ್ಣಿನ ಗೂಡಿನೊಳಗೆ ರೂಪುಗೊಂಡು ಮೊದಲ ಮಳೆ ಬರುತ್ತಿದ್ದಂತೆಯೇ ದುಂಬಿಗಳಾಗಿ ಹೊರಬರುತ್ತವೆ.
ಮುಸ್ಸಂಜೆಯಲ್ಲಿ ಭೂಮಿಯಿಂದ ಹೊರಬರುವ ದುಂಬಿಗಳನ್ನು ಹಿಡಿದು ನಾಶಪಡಿಸುವುದರಿಂದ ಸಂತತಿಯನ್ನು ಕಡಿಮೆ ಮಾಡಬಹುದು.
2-3ನೇ ಹಂತದ ಬೇರು ಹುಳುಗಳು ಹೆಚ್ಚಾಗಿರುವಾಗ ಕ್ಲೋರಪೈರಿಫಾಸ್ 20 EC — ಎಕರೆಗೆ 2 ಲೀ. (200 ಲೀ. ನೀರಿಗೆ 400 ಮಿ.ಲೀ.) ದ್ರಾವಣವನ್ನು ಪ್ರತಿ ಮರಕ್ಕೆ 3-5 ಲೀ. ಪ್ರಮಾಣದಲ್ಲಿ ಮರದ ಸುತ್ತ ಸುರಿಯಬೇಕು.
ಬಸಿಗಾಲುವೆಗಳಲ್ಲಿ 3-4 ದಿನ ಕಂಠ ಮಟ್ಟ ನೀರು ನಿಲ್ಲಿಸಿದರೆ ಹುಳುಗಳು ಮೇಲ್ಪದರಕ್ಕೆ ಬರುತ್ತವೆ. ಮಧ್ಯದ ಪಟದಲ್ಲಿ ಅಗೆದು ಹುಳುಗಳನ್ನು ಹೆಕ್ಕಿ ನಾಶಪಡಿಸಬೇಕು. ಮೂರನೇ ವಾರದಲ್ಲಿ ಕ್ಲೋರಪೈರಿಫಾಸ್ 20 EC ಅಥವಾ ಇಮಿಡಾಕ್ಲೋಪ್ರಿಡ್ 17.8 SL (ಎಕರೆಗೆ 700 ಮಿ.ಲೀ.) ದ್ರಾವಣ.
ಮೆಟಾರೈಜಿಯಂ ಅನಿಸೋಪ್ಲಿಯೆ ಅಥವಾ ಹೆಟರೋರಾಬ್ಡಿಟಿಸ್ ಜಂತುಹುಳು 20 ಗ್ರಾಂ ಪುಡಿಯನ್ನು 1 ಲೀ. ನೀರಿನಲ್ಲಿ ಬೆರೆಸಿ ಗಿಡದ ಬುಡಕ್ಕೆ ಹಾಕಬೇಕು. ಮರವೊಂದಕ್ಕೆ 250 ಗ್ರಾಂ ಬೇವಿನ ಹಿಂಡಿ ಸೇರಿಸಬೇಕು.
ತೋಟಗಳಿಗೆ ಕಲ್ಲುಗೊಚ್ಚು ಮಣ್ಣನ್ನು ಲಭ್ಯವಿರುವೆಡೆ ಹಾಕಬೇಕು. 3-4 ವರ್ಷ ನಿರಂತರ ಸಮಗ್ರ ಹತೋಟಿ ಕ್ರಮಗಳಿಂದ ಹಾನಿಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು.