ಮಾಮ್‌ಕೋಸ್
MAMCOS
ಮಾಮ್‌ಕೋಸ್ ಗೆ ಸುಸ್ವಾಗತ — 1939 ರಿಂದ ನಿರಂತರ ನಿಮ್ಮ ಸೇವೆಯಲ್ಲಿ

ಮರಣೋತ್ತರ ನಿಧಿ ಯೋಜನೆ-II

ಸದಸ್ಯರ ಕುಟುಂಬದ ಆರ್ಥಿಕ ಭದ್ರತೆಗಾಗಿ ಮರಣೋತ್ತರ ನಿಧಿ ಸೌಲಭ್ಯ

ಯೋಜನೆಯ ವಿವರಗಳು

60 ವರ್ಷದೊಳಗಿನ ಸಂಘದ ಸದಸ್ಯರು ರೂ.3,000, ರೂ.5,000 ಹಾಗೂ ರೂ.10,000 ಸ್ಲಾಬ್ ಗಳಲ್ಲಿ ಆಯ್ಕೆ ಮಾಡಿ ನೋಂದಾಯಿಸಿದಲ್ಲಿ, ತಮ್ಮ ನಂತರ ನಾಮಿನಿ/ ವಾರಸುದಾರರಿಗೆ ಕ್ರಮವಾಗಿ ರೂ.15,000, ರೂ.25,000 ಹಾಗೂ ರೂ.50,000 ವನ್ನು “ಮರಣೋತ್ತರ ನಿಧಿ ಯೋಜನೆ––II” ರಲ್ಲಿ ಹಲವು ನಿಬಂಧನೆಗೆ ಒಳಪಟ್ಟು ನೀಡಲಾಗುತ್ತಿದೆ.

ವಂತಿಕೆ, ಪರಿಹಾರ ಹಾಗೂ ಕಡ್ಡಾಯ ಉತ್ಪನ್ನ ಪೂರೈಕೆ ವಿವರಗಳು

ಕ್ರ.ಸಂ. ವಂತಿಕೆ ಮೊಬಲಗು ಮತ್ತು ಪರಿಹಾರದ ಮೊಬಲಗು ಸಿಪ್ಪೇಗೋಟು ಹೊರತುಪಡಿಸಿ ಸಂಘಕ್ಕೆ ಕಳುಹಿಸಬೇಕಾದ ಅಡಿಕೆ (ಪ್ರತೀ ವರ್ಷ) ಸಿಪ್ಪೇಗೋಟು ಆದಲ್ಲಿ ಕಳುಹಿಸಬೇಕಾದ ಸಿಪ್ಪೇಗೋಟು ಪ್ರಮಾಣ (ಪ್ರತೀ ವರ್ಷ) ಅಡಿಕೆ ಹೊರತುಪಡಿಸಿ ಕಾಳುಮೆಣಸು ಆದಲ್ಲಿ ಕಳುಹಿಸಬೇಕಾದ ಪ್ರಮಾಣ (ಪ್ರತೀ ವರ್ಷ)
1
ವಂತಿಕೆ: ರೂ. 3,000/-
ಪರಿಹಾರ: ರೂ. 15,000/-
75 ಕೆ.ಜಿ. 200 ಕೆ.ಜಿ. 50 ಕೆ.ಜಿ.
2
ವಂತಿಕೆ: ರೂ. 5,000/-
ಪರಿಹಾರ: ರೂ. 25,000/-
150 ಕೆ.ಜಿ. 400 ಕೆ.ಜಿ. 50 ಕೆ.ಜಿ.
3
ವಂತಿಕೆ: ರೂ. 10,000/-
ಪರಿಹಾರ: ರೂ. 50,000/-
300 ಕೆ.ಜಿ. 600 ಕೆ.ಜಿ. 75 ಕೆ.ಜಿ.

ಯೋಜನೆಯ ನಿಬಂಧನೆಗಳು

  1. ಮರಣೋತ್ತರ ನಿಧಿ ಯೋಜನೆಗೆ ನೊಂದಾಯಿಸಲು, ಅರ್ಜಿ ಸಲ್ಲಿಸುವ ದಿನಾಂಕಕ್ಕೆ 60 ವರ್ಷದೊಳಗಿರುವ ಸದಸ್ಯರು ಮಾತ್ರಾ ಅರ್ಹರಾಗುತ್ತಾರೆ.
  2. ಅರ್ಹ ಸದಸ್ಯರು ತಮ್ಮ ಜನ್ಮ ದಿನಾಂಕದ ದೃಢೀಕೃತ ದಾಖಲೆ ಹಾಗೂ ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಒಂದು ಭಾವ ಚಿತ್ರವನ್ನು ಕೊಟ್ಟು ತಮ್ಮ ಸದಸ್ಯತ್ವವನ್ನು ನೊಂದಾಯಿಸಬಹುದು.
  3. ಸಂಘದ “ಎ” ತರಗತಿ ಸದಸ್ಯರು ರೂ.3000, ರೂ.5000 ಮತ್ತು ರೂ 10000 ಗಳ ಮೂರು ರೀತಿ ವಂತಿಕೆಯಲ್ಲಿ ಯಾವುದಾದರೂ ಒಂದು ವಂತಿಕೆಯ ಮೊತ್ತವನ್ನು ಮಾತ್ರಾ ಜಮಾ ಮಾಡಿ ಯೋಜನೆಗೆ ನೊಂದಾಯಿಸಿಕೊಳ್ಳಬಹುದಾಗಿರುತ್ತದೆ.
  4. ಈ ಯೋಜನೆಯಲ್ಲಿ ನೊಂದಾಯಿಸಿದ ಸದಸ್ಯರು ಸಂಘಕ್ಕೆ ಕಡ್ಡಾಯವಾಗಿ ಹಾಕಬೇಕಾದ ಕನಿಷ್ಠ ಅಡಿಕೆ ಅಥವಾ ಕಾಳುಮೆಣಸಿನ ಪ್ರಮಾಣ ಕೆಳಕಂಡಂತಿರುತ್ತದೆ.
  5. ಈ ಯೋಜನೆಗೆ ಒಳಪಟ್ಟ ಸದಸ್ಯರು ಕೋಷ್ಠಕದಲ್ಲಿ ನಿಗಧಿಪಡಿಸಿದಂತೆ ಆಯ್ಕೆ ಮಾಡಿಕೊಂಡಿರುವ ಪರಿಹಾರ ಮೊಬಲಗಿಗನುಗುನವಾಗಿ ಪ್ರತೀ ಆರ್ಥಿಕ ವರ್ಷದಲ್ಲಿ ಸಂಘಕ್ಕೆ ಕಡ್ಡಾಯವಾಗಿ ಅಡಿಕೆ ಅಥವಾ ಕಾಳು ಮೆಣಸನ್ನು ಕಳುಹಿಸತಕ್ಕದ್ದು. ಒಂದು ವೇಳೆ ಅಡಿಕೆಯನ್ನು ಸಂಘದಲ್ಲಿ ಮಾರಾಟ ಮಾಡದೇ ವಾಪಾಸ್ ಪಡೆದಲ್ಲಿ ಈ ಯೋಜನೆಯ ಸದಸ್ಯರು ಯೋಜನೆಯ ಸೌಲಭ್ಯವನ್ನು ಪಡೆಯಲು ಅನರ್ಹರಾಗುತ್ತಾರೆ ಹಾಗೂ ಅವರ ವಂತಿಕೆಯ ಮೊತ್ತವನ್ನು ಮಾತ್ರಾ ವಾಪಾಸ್ಸು ಪಡೆಯಲು ಅರ್ಹರಿರುತ್ತಾರೆ.
  6. ನಿಧಿಯ ಸದಸ್ಯರಿಂದ ಸಂಘಕ್ಕೆ ಬರಬೇಕಾದ ಯಾವುದೇ ಬಾಕಿ ಇದ್ದಲ್ಲಿ ಸಂಘವು ಮರಣೋತ್ತರ ನಿಧಿಯ ಮೊಬಲಗಿನಲ್ಲಿ ಈ ಬಾಕಿಯನ್ನು ಕಟಾಯಿಸಿಕೊಳ್ಳಲು ಅಧಿಕಾರವನ್ನು ಹೊಂದಿರುತ್ತದೆ.
  7. ಈ ಯೋಜನೆಯ ಸದಸ್ಯರು ಯೋಜನೆಯ ಈಗಿನ ಮತ್ತು ಮುಂದೆ ಬರಬಹುದಾದ ಎಲ್ಲಾ ನಿಯಮ ನಿಬಂಧನೆಗಳಿಗೆ ಬದ್ಧರಾಗಿರತಕ್ಕದ್ದು.
  8. ಈ ಯೋಜನೆಯ ಬಗ್ಗೆ ಉಂಟಾಗುವ ಯಾವುದೇ ವಿವಾದಗಳಿದ್ದರೂ ಸಂಘದ ಆಡಳಿತ ಮಂಡಲಿಯ ತೀರ್ಮಾನವೇ ಅಂತಿಮವಾಗಿರುತ್ತದೆ.

ಹೆಚ್ಚಿನ ವಿವರಗಳಿಗೆ ಕೇಂದ್ರ ಕಛೇರಿ, ಹತ್ತಿರದ ಶಾಖೆ ಅಥವಾ ಏಜೆನ್ಸಿಯನ್ನು ಸಂಪರ್ಕಿಸಿ.