1939 ರಿಂದ ನಿರಂತರ ನಿಮ್ಮ ಸೇವೆಯಲ್ಲಿ
ಸಹಕಾರ ಸಂಘದ ಶ್ರೇಷ್ಠತೆಯ ಪ್ರತೀಕ
ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತ
Malnad Areca Marketing Co-operative Society Limited
call 08182-250513 250514 email ho@mamcos.info
location_on ಎ.ಪಿ.ಎಂ.ಸಿ ಯಾರ್ಡ್, ಸಾಗರ ರಸ್ತೆ, ಶಿವಮೊಗ್ಗ - 577204
ಅಡಿಕೆ ಕ್ಯಾನ್ಸರ್ ಕಾರಕ ಎನ್ನುವ ಕುರಿತಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ಕುರಿತಂತೆ ದಿನಾಂಕ 06.03.2024 ರಂದು ಮಾನ್ಯ ಕೇಂದ್ರ ಕಾನೂನು ಸಚಿವರಾದ ಶ್ರೀ ಅರ್ಜುನ್ ಮೇಗವಾಲ್ ರವರನ್ನು ಶ್ರೀ ಮಂಜಪ್ಪ ಹೊಸಬಾಳೆ, ಅಧ್ಯಕ್ಷರು, ಕ್ರ್ಯಾಮ್ ಇವರ ನೇತೃತ್ವದಲ್ಲಿ ಬೇಟಿ ಮಾಡಲಾಯಿತು. ಈ ಭೇಟಿಯಲ್ಲಿ ಕರ್ನಾಟಕ ರಾಜ್ಯ ಅರೆಕಾ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ವೈ.ಎಸ್., ಆಪ್ಕೋಸ್ ಅಧ್ಯಕ್ಷರಾದ ಶ್ರೀ ಇಂದೂದರಗೌಡ, ಮ್ಯಾಮ್ಕೋಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶ್ರೀಕಾಂತ ಬರುವೆ, ಶ್ರೀ ರಾಜೇಶ್ ಕುಮಾರ್ ಖೇರ್, ಮತ್ತು ಶಿರಸಿಯ ಟಿಎಸ್‌ಎಸ್ ಪ್ರಧಾನ ವ್ಯವಸ್ಥಾಪಕರಾದ ಶ್ರೀ ವಿಜಯಾನಂದ ಭಟ್ ಉಪಸ್ಥಿತರಿದ್ದರು. ಮಾನ್ಯ ಕಾನೂನು ಸಚಿವರು ಅಡಿಕೆ ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡುವ ಭರವಸೆ ನೀಡಿದ್ದಾರೆ.