1939 ರಿಂದ ನಿರಂತರ ನಿಮ್ಮ ಸೇವೆಯಲ್ಲಿ
ಸಹಕಾರ ಸಂಘದ ಶ್ರೇಷ್ಠತೆಯ ಪ್ರತೀಕ
ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತ
Malnad Areca Marketing Co-operative Society Limited
call 08182-250513 250514 email ho@mamcos.info
location_on ಎ.ಪಿ.ಎಂ.ಸಿ ಯಾರ್ಡ್, ಸಾಗರ ರಸ್ತೆ, ಶಿವಮೊಗ್ಗ - 577204
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಮತ್ತು ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ಮಾಮ್ಕೋಸ್ ಮತ್ತು ಇತರ ಮಾರಾಟ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ ಗಾಜನೂರಿನ ತುಂತುರ ಫಾರಂನಲ್ಲಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸನ್ಮಾನ್ಯ ಗೃಹ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ ಇವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾಮ್ಕೋಸ್ ಉಪಾಧ್ಯಕ್ಷರಾದ ಶ್ರೀ ಹೆಚ್.ಎಸ್.ಮಹೇಶ್ ಹುಲ್ಕುಳಿ, ವ್ಯವಸ್ಥಾಪಕ ನಿರ್ದೇಶಕರಾದ ಆರ್.ರಾಘವೇಂದ್ರ, ಯೂನಿಯನ್ ನ ಆಡಳಿತ ಮಂಡಳಿ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಮಾಮ್ಕೋಸ್, ರಾಮ್ಕೋಸ್ & ಆಪ್ಸಕೋಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಬೆಂಗಳೂರಿನ ಸನ್ನದು ಲೆಕ್ಕಪರಿಶೋಧಕರಾದ ಶ್ರೀ ಅನಿಲ್ ಭಾರದ್ವಾಜ್ ಮತ್ತು ನವುಲೆ ಕೃಷಿ ವಿದ್ಯಾಲಯದ ವಿಶ್ರಾಂತ ಪ್ರೊಫೆಸರ್ ಡಾ.ಎಂ.ಎಸ್.ವಿಘ್ನೇಶ್ ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡಿದರು.