1939 ರಿಂದ ನಿರಂತರ ನಿಮ್ಮ ಸೇವೆಯಲ್ಲಿ
ಸಹಕಾರ ಸಂಘದ ಶ್ರೇಷ್ಠತೆಯ ಪ್ರತೀಕ
ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತ
Malnad Areca Marketing Co-operative Society Limited
call 08182-250513 250514 email ho@mamcos.info
location_on ಎ.ಪಿ.ಎಂ.ಸಿ ಯಾರ್ಡ್, ಸಾಗರ ರಸ್ತೆ, ಶಿವಮೊಗ್ಗ - 577204
ಶಿವಮೊಗ್ಗ ಮಾಮ್ ಕೋಸ್ ನ ಹೊಸನಗರ ವಿಭಾಗದ ಷೇರುದಾರರ ಸಮಾಲೋಚನಾ ಸಭೆ ನಡೆಸಲಾಯಿತು.ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಹೆಚ್.ಎಸ್.ಮಹೇಶ್ ಹುಲ್ಕುಳಿ ಅವರು ಸಂಸ್ಥೆಯ ಪ್ರಗತಿ ಕುರಿತು ಹಾಗೂ ಷೇರುದಾರರ ಸಲಹೆ ಮತ್ತು ಪ್ರಶ್ನೆಗಳಿಗೆ ಉತ್ತರಿಸಿದರು. ಸಂಸ್ಥೆಯ ನಿರ್ದೇಶಕರಾದ ಶ್ರೀ ಸುಬ್ರಮ್ಹಣ್ಯ ಹೆಚ್.ಟಿ ಅವರು ಎಲ್ಲರನ್ನು ಸ್ವಾಗತಿಸಿದರು.ಮಾಜಿ ಉಪಾಧ್ಯಕ್ಷರಾದ ಶ್ರೀ ವೈ.ಎಸ್.ಸುಬ್ರಹ್ಮಣ್ಯ ಅವರು, ಸಂಸ್ಥೆಯ ನಿರ್ದೇಶಕರುಗಳು ಹಾಗೂ ಷೇರುದಾರರು, ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಪೆಕಟ್ಟೆ ಏಜೆನ್ಸಿಯ ಏಜೆಂಟರಾದ ಶ್ರೀ ಗಣಪತಿ ಪಂಡಿತ್ ಹಾಗೂ ಅವರ ಶ್ರೀಮತಿ ಅವರಿಗೆ ಅವರ ಸೇವೆಯನ್ನು ಸ್ಮರಿಸಿ ಸಂಸ್ಥೆಯಿಂದ ಗೌರವಿಸಲಾಯಿತು. ನಿರ್ದೇಶಕರಾದ ಕೆ.ವಿ.ಕೃಷ್ಣಮೂರ್ತಿ ಅವರು ನಿರೂಪಣೆ ಮಾಡಿದರು. ನಿರ್ದೇಶಕರಾದ ವಿಜಯಲಕ್ಷ್ಮೀ.ಯು.ಹೆಚ್ ಅವರು ವಂದನಾರ್ಪಣೆ ಸಲ್ಲಿಸಿದರು.