1939 ರಿಂದ ನಿರಂತರ ನಿಮ್ಮ ಸೇವೆಯಲ್ಲಿ
ಸಹಕಾರ ಸಂಘದ ಶ್ರೇಷ್ಠತೆಯ ಪ್ರತೀಕ
ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತ
Malnad Areca Marketing Co-operative Society Limited
call 08182-250513 250514 email ho@mamcos.info
location_on ಎ.ಪಿ.ಎಂ.ಸಿ ಯಾರ್ಡ್, ಸಾಗರ ರಸ್ತೆ, ಶಿವಮೊಗ್ಗ - 577204
ಶಿವಮೊಗ್ಗ ಮಾಮ್ ಕೋಸ್ ನ ತೀರ್ಥಹಳ್ಳಿ ವಿಭಾಗದ ಷೇರುದಾರರ ಸಮಾಲೋಚನಾ ಸಭೆ ನಡೆಸಲಾಯಿತು.ಈ ಸಭೆಯಲ್ಲಿ ಮಾನ್ಯ ಗೃಹ ಸಚಿವರಾದ ಶ್ರೀ ಅರಗ ಜ್ಞಾನೇಂದ್ರ ಅವರು ಮಾತನಾಡಿ, ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎನ್ನುವ ಬಗ್ಗೆ ಕೇಂದ್ರಸರ್ಕಾರದ ಸಚಿವರುಗಳು ಹಾಗೂ ತಜ್ಞರೊಂದಿಗೆ ಚರ್ಚಿಸಿರುವ ಬಗ್ಗೆ ತಿಳಿಸಿದರು.ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಹೆಚ್.ಎಸ್.ಮಹೇಶ್ ಹುಲ್ಕುಳಿ ಅವರು ಸಂಸ್ಥೆಯ ಪ್ರಗತಿ ಕುರಿತು ಹಾಗೂ ಷೇರುದಾರರ ಸಲಹೆ ಮತ್ತು ಪ್ರಶ್ನೆಗಳಿಗೆ ಉತ್ತರಿಸಿದರು.ಈ ಸಂಸ್ಥೆಯ ಮಾಜಿ ಉಪಾಧ್ಯಕ್ಷರಾದ ಶ್ರೀ ವೈ.ಎಸ್.ಸುಬ್ರಹ್ಮಣ್ಯ ಅವರು ಸಂಸ್ಥೆಯ ನಿರ್ದೇಶಕರುಗಳು,ವ್ಯವಸ್ಥಾಪಕ ನಿರ್ದೇಶಕರಾದ ಆರ್.ರಾಘವೇಂದ್ರ ಅವರು ಹಾಗೂ ಷೇರುದಾರರು, ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ನಿರ್ದೇಶಕರಾದ ರತ್ನಾಕರ ಬೆಳಗಿನಮನೆ ಅವರು ನಿರೂಪಣೆ ಮಾಡಿದರು. ಸಿ.ಬಿ.ಈಶ್ವರ್ ಅವರು ಎಲ್ಲರನ್ನು ಸ್ವಾಗತಿಸಿದರು.